Home ತಾಜಾ ಸುದ್ದಿ Israel Lebanon War : ಗಡಿ ನುಗ್ಗಿದ ಇಸ್ರೇಲ್ ಟ್ಯಾಂಕರ್‌ಗಳು; ಹಿಜ್ಬುಲ್ಲಾ ಭದ್ರಕೋಟೆಗಳ ಮೇಲೆ ಬಾಂಬ್...

    Israel Lebanon War : ಗಡಿ ನುಗ್ಗಿದ ಇಸ್ರೇಲ್ ಟ್ಯಾಂಕರ್‌ಗಳು; ಹಿಜ್ಬುಲ್ಲಾ ಭದ್ರಕೋಟೆಗಳ ಮೇಲೆ ಬಾಂಬ್ ಮಳೆ!

    0
    44
    Israel Lebanon War: Israeli tankers cross the border; Bombs rain down on Hezbollah strongholds!

    ದಕ್ಷಿಣ ಲೆಬನಾನ್ಮ : ಧ್ಯಪ್ರಾಚ್ಯದಲ್ಲಿ ಯುದ್ಧ ಮತ್ತಷ್ಟು ವಿಕೋಪಕ್ಕೆ ತಿರುಗಿದೆ. ಇಸ್ರೇಲ್ ರಕ್ಷಣಾ ಪಡೆಗಳು (IDF) ದಕ್ಷಿಣ ಲೆಬನಾನ್ ಮೇಲೆ ಸೀಮಿತ ಭೂಸೇನಾ ಕಾರ್ಯಾಚರಣೆಯನ್ನು (Limited Ground Operation) ಅಧಿಕೃತವಾಗಿ ಪ್ರಾರಂಭಿಸಿವೆ. ಗಡಿಯುದ್ದಕ್ಕೂ ಇಸ್ರೇಲ್‌ನ ಸೈನಿಕರು ಮತ್ತು ಟ್ಯಾಂಕರ್‌ಗಳು ಲೆಬನಾನ್ ಭೂಭಾಗಕ್ಕೆ ನುಗ್ಗಿದ್ದು, ಹಿಜ್ಬುಲ್ಲಾ ಉಗ್ರಗಾಮಿ ಸಂಘಟನೆಯ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿವೆ.

    ಗುರಿ ಮತ್ತು ಉದ್ದೇಶ: ದಕ್ಷಿಣ ಲೆಬನಾನ್‌ನ ಹಳ್ಳಿಗಳಲ್ಲಿ ಹಿಜ್ಬುಲ್ಲಾ ಸ್ಥಾಪಿಸಿರುವ ಮೂಲಸೌಕರ್ಯಗಳು ಮತ್ತು ಶಸ್ತ್ರಾಸ್ತ್ರ ಮಳಿಗೆಗಳನ್ನು ನಾಶಪಡಿಸುವುದು ಈ ಕಾರ್ಯಾಚರಣೆಯ ಮುಖ್ಯ ಉದ್ದೇಶ ಎಂದು ಇಸ್ರೇಲ್ ಹೇಳಿದೆ. ಈ ಪ್ರದೇಶಗಳಿಂದ ಇಸ್ರೇಲ್‌ನ ಉತ್ತರ ಭಾಗದ ನಾಗರಿಕರ ಮೇಲೆ ನಿರಂತರವಾಗಿ ರಾಕೆಟ್ ದಾಳಿಗಳು ನಡೆಯುತ್ತಿದ್ದವು. ಈ ಬೆದರಿಕೆಯನ್ನು ಸಂಪೂರ್ಣವಾಗಿ ಹತ್ತಿಕ್ಕಲು ಈ “ನಿರ್ದಿಷ್ಟ ಮತ್ತು ಸೀಮಿತ” ಕಾರ್ಯಾಚರಣೆ ಅನಿವಾರ್ಯ ಎಂದು ಇಸ್ರೇಲ್ ಸೇನೆ ತಿಳಿಸಿದೆ.

    ಭಾರಿ ಆತಂಕ ಮತ್ತು ಹಿಜ್ಬುಲ್ಲಾ ಎಚ್ಚರಿಕೆ: ಇಸ್ರೇಲ್‌ನ ಈ ನಡೆಯಿಂದಾಗಿ ಲೇಬನಾನ್ ಮತ್ತು ಇಸ್ರೇಲ್ ಗಡಿಯಲ್ಲಿ ಜನಜೀವನ ಸಂಪೂರ್ಣ ಸ್ತಬ್ಧಗೊಂಡಿದೆ. ಅತ್ತ ಹಿಜ್ಬುಲ್ಲಾ ಸಂಘಟನೆಯೂ ಕೂಡ ಇಸ್ರೇಲ್ ಪಡೆಯನ್ನು ಎದುರಿಸಲು ಸಜ್ಜಾಗಿದ್ದು, ಗಡಿಯಲ್ಲಿ ಭಾರಿ ಪ್ರಮಾಣದ ಗುಂಡಿನ ಚಕಮಕಿ ನಡೆಯುತ್ತಿದೆ. ಇಸ್ರೇಲ್‌ನ ವೈಮಾನಿಕ ದಾಳಿಗಳ ಜೊತೆಗೆ ಈಗ ಭೂಸೇನೆಯೂ ಕಣಕ್ಕಿಳಿದಿರುವುದು ಇಡೀ ಪ್ರಾಂತ್ಯದಲ್ಲಿ ಭೀಕರ ರಕ್ತಪಾತಕ್ಕೆ ದಾರಿ ಮಾಡಿಕೊಡುವ ಆತಂಕ ಮೂಡಿಸಿದೆ.

    LEAVE A REPLY

    Please enter your comment!
    Please enter your name here

    error: Content is protected !!