HomeLOCALBengaluru : ತಂದೆಯನ್ನೇ ಚೀಲದಲ್ಲಿ ತುಂಬಿ ಕುರಿಯರ್ ಮಾಡಲು ಬಂದ ಮಹಿಳೆ

Bengaluru : ತಂದೆಯನ್ನೇ ಚೀಲದಲ್ಲಿ ತುಂಬಿ ಕುರಿಯರ್ ಮಾಡಲು ಬಂದ ಮಹಿಳೆ

ಬೆಂಗಳೂರು : ಬೆಂಗಳೂರಿನ ವೈಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಮಹಿಳೆಯೊಬ್ಬಳು ತನ್ನ ಪತಿ, ಅತ್ತೆ ಮತ್ತು ಮೈದುನನೊಂದಿಗೆ ಸೇರಿ ತನ್ನ ವಯಸ್ಸಾದ ತಂದೆಯನ್ನೇ ಗೋಣಿ ಚೀಲದಲ್ಲಿ ತುಂಬಿ ಕುರಿಯರ್ ಮಾಡಲು ಕಚೇರಿಗೆ ತಂದಿದ್ದಾಳೆ. ಚೀಲದ ಒಳಗೆ ಏನಿದೆ ಎಂದು ಕುರಿಯರ್ ಕಚೇರಿಯ ಸಿಬ್ಬಂದಿ ಕೇಳಿದಾಗ ಕುಟುಂಬದವರು ಮೌನವಾಗಿದ್ದರು. ಅನುಮಾನಗೊಂಡ ಸಿಬ್ಬಂದಿ ಚೀಲವನ್ನು ಬಿಚ್ಚಿದಾಗ, ಅದರೊಳಗೆ ವೃದ್ಧರೊಬ್ಬರು ಉಸಿರಾಡಲು ಕಷ್ಟಪಡುತ್ತಿರುವುದು ಕಂಡುಬಂದು ಎಲ್ಲರೂ ದಂಗಾಗಿದ್ದಾರೆ.

ಕಾರಣ ಕೇಳಿ ಪೊಲೀಸರೇ ಶಾಕ್! ಉಗಾದಿ ಮತ್ತು ರಂಜಾನ್ ಹಬ್ಬದ ಸಮಯದಲ್ಲಿ ಬಸ್ ಟಿಕೆಟ್‌ಗಳು ಸಿಗುತ್ತಿಲ್ಲ, ಹಾಗಾಗಿ ಮನುಷ್ಯರನ್ನು ಕುರಿಯರ್ ಮಾಡುವುದೇ ದಾರಿ ಎನ್ನುವ ಅರ್ಥದಲ್ಲಿ ಸೋಶಿಯಲ್ ಮೀಡಿಯಾ ರೀಲ್ಸ್‌ ಮಾಡಲು ಈ ಸಾಹಸ ಮಾಡಿದ್ದಾಗಿ ಕುಟುಂಬದವರು ಸಮರ್ಥಿಸಿಕೊಂಡಿದ್ದಾರೆ. ಅಚ್ಚರಿಯೆಂದರೆ, ಸಿಕ್ಕಿಬಿದ್ದ ನಂತರವೂ “ನಾವು ಇಷ್ಟು ದೂರ ಕಷ್ಟಪಟ್ಟು ಬಂದಿದ್ದೇವೆ, ಪಾರ್ಸೆಲ್ ಒಪ್ಪಿಕೊಳ್ಳಿ” ಎಂದು ಸಿಬ್ಬಂದಿಯೊಂದಿಗೆ ವಾದ ಮಾಡಿದ್ದಾರೆ.

ಪೊಲೀಸ್ ಕ್ರಮ: ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಕುಟುಂಬದವರನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲಾಗಿದೆ. ನಂತರ ಅವರು ತಮ್ಮ ಬೇಜವಾಬ್ದಾರಿತನಕ್ಕೆ ಕ್ಷಮೆಯಾಚಿಸುವ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಪೊಲೀಸರು ಅವರಿಗೆ ಕಠಿಣ ಎಚ್ಚರಿಕೆ ನೀಡಿ ಕಳುಹಿಸಿಕೊಟ್ಟಿದ್ದಾರೆ.

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments