Home ತಾಜಾ ಸುದ್ದಿ Ram Gopal Varma Review : ‘ಧುರಂಧರ್ 2’ ಮುಂದೆ ‘ಶೋಲೆ’ ಕೂಡ ಟಿವಿ ಸೀರಿಯಲ್...

    Ram Gopal Varma Review : ‘ಧುರಂಧರ್ 2’ ಮುಂದೆ ‘ಶೋಲೆ’ ಕೂಡ ಟಿವಿ ಸೀರಿಯಲ್ ಇದ್ದಂತೆ! ಆರ್ಜಿವಿ ಸ್ಫೋಟಕ ವಿಮರ್ಶೆ; ದಕ್ಷಿಣದ ಸಿನಿಮಾಗಳಿಗೆ ನಡುಕ!

    0
    49
    Ram Gopal Varma Review : 'Sholay' is like a TV serial before 'Dhurandhar 2'! RGV Explosive Review; Tremor for southern movies!

    ಮುಂಬೈ/ಬಾಲಿವುಡ್ : ಶೋಲೆ ಕೂಡ ಟಿವಿ ಸೀರಿಯಲ್ ಇದ್ದಂತೆ! ಆದಿತ್ಯ ಧರ್ ನಿರ್ದೇಶನದ ‘ಧುರಂಧರ್ 2’ ಚಿತ್ರವನ್ನು ವೀಕ್ಷಿಸಿದ ರಾಮ್ ಗೋಪಾಲ್ ವರ್ಮಾ, ಇದೊಂದು ಹೊಸ ಕಾಲದ ಸಿನಿಮಾದ ಉದಯ ಎಂದು ಬಣ್ಣಿಸಿದ್ದಾರೆ. “ಭಾರತೀಯ ಚಿತ್ರರಂಗದ ಸರ್ವಶ್ರೇಷ್ಠ ಚಿತ್ರಗಳಾದ ‘ಮೊಘಲ್-ಎ-ಅಜಂ’ ಮತ್ತು ‘ಶೋಲೆ’ ಕೂಡ ಈ ಸಿನಿಮಾದ ಮುಂದೆ ಟಿವಿ ಸೀರಿಯಲ್‌ಗಳಂತೆ ಕಾಣುತ್ತವೆ” ಎಂದು ಆಘಾತಕಾರಿ ಹೇಳಿಕೆ ನೀಡಿದ್ದಾರೆ. ಈ ಸಿನಿಮಾ ಹಳೆಯ ಸಿನಿಮಾ ವ್ಯಾಕರಣವನ್ನೇ ಬದಲಿಸಲಿದೆ ಎಂಬುದು ವರ್ಮಾ ಅವರ ಅಭಿಪ್ರಾಯ.

    ದಕ್ಷಿಣ ಭಾರತದ ಸಿನಿಮಾಗಳಿಗೆ ಸವಾಲು: ದಕ್ಷಿಣ ಭಾರತದ ಸಿನಿಮಾಗಳು ಬಾಲಿವುಡ್ ಮೇಲೆ ಸಾಧಿಸಿರುವ ಪ್ರಭುತ್ವವನ್ನು ಈ ಸಿನಿಮಾ ಮುರಿಯಲಿದೆ ಎಂದು ವರ್ಮಾ ಭವಿಷ್ಯ ನುಡಿದಿದ್ದಾರೆ. “ಒಂದು ವೇಳೆ ‘ಧುರಂಧರ್ 2’ ಬಾಕ್ಸ್ ಆಫೀಸ್‌ನಲ್ಲಿ 1,500 ರಿಂದ 2,000 ಕೋಟಿ ರೂ. ಗಳಿಸಿದರೆ, ಹಳೆಯ ಮಾದರಿಯ ದಕ್ಷಿಣದ ಸಿನಿಮಾಗಳು ಮಕಾಡೆ ಮಲಗಲಿವೆ. ಸ್ಪೀಲ್‌ಬರ್ಗ್ ಮತ್ತು ಕ್ರಿಸ್ಟೋಫರ್ ನೋಲನ್ ಕೂಡ ತಮ್ಮೆಲ್ಲ ಕೆಲಸ ಬಿಟ್ಟು ಈ ಸಿನಿಮಾ ನೋಡಬೇಕು” ಎಂದು ಅವರು ಅತಿಶಯೋಕ್ತಿಯಿಂದ ಹೊಗಳಿದ್ದಾರೆ.

    ಚಿತ್ರದ ತಾರಾಗಣ: ಈ ಚಿತ್ರದಲ್ಲಿ ರಣವೀರ್ ಸಿಂಗ್, ಆರ್. ಮಾಧವನ್, ಅರ್ಜುನ್ ರಾಂಪಾಲ್ ಮತ್ತು ಸಂಜಯ್ ದತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈಗಾಗಲೇ ಅಡ್ವಾನ್ಸ್ ಬುಕಿಂಗ್‌ನಲ್ಲಿ ಚಿತ್ರವು 150 ಕೋಟಿ ರೂ. ದಾಟಿದ್ದು, ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆಯುವ ನಿರೀಕ್ಷೆಯಿದೆ.

    LEAVE A REPLY

    Please enter your comment!
    Please enter your name here

    error: Content is protected !!