Home ಹಣಕಾಸು RBI | ಒಟಿಪಿ ಮಾತ್ರ ಇನ್ನು ಮುಂದೆ ಏಕೆ ಕೆಲಸ ಮಾಡುವುದಿಲ್ಲ: ಆರ್‌ಬಿಐನ ಹೊಸ ಡಿಜಿಟಲ್...

    RBI | ಒಟಿಪಿ ಮಾತ್ರ ಇನ್ನು ಮುಂದೆ ಏಕೆ ಕೆಲಸ ಮಾಡುವುದಿಲ್ಲ: ಆರ್‌ಬಿಐನ ಹೊಸ ಡಿಜಿಟಲ್ ಪಾವತಿ ನಿಯಮಗಳನ್ನು ವಿವರಿಸಲಾಗಿದೆ

    0
    70
    RBI | Why OTP alone won't work anymore: RBI's new digital payment rules explained

    RBI : ಇಂದಿನಿಂದ ಆನ್‌ಲೈನ್‌ನಲ್ಲಿ ಹಣ ಪಾವತಿಸುವ ವಿಧಾನ ಮತ್ತಷ್ಟು ಸುರಕ್ಷಿತವಾಗಲಿದೆ. ಇನ್ಮುಂದೆ ನೀವು ಯುಪಿಐ ಅಥವಾ ಕಾರ್ಡ್ ಮೂಲಕ ಹಣ ಕಳುಹಿಸುವಾಗ ಕೇವಲ ಒಟಿಪಿ (OTP) ನೀಡಿದರೆ ಸಾಲದು. ಅದರ ಜೊತೆಗೆ ನಿಮ್ಮ ಫಿಂಗರ್‌ಪ್ರಿಂಟ್ (Biometric), ಪಿನ್ (PIN) ಅಥವಾ ಪಾಸ್‌ವರ್ಡ್‌ನಂತಹ ಎರಡನೇ ಹಂತದ ದೃಢೀಕರಣ ಕಡ್ಡಾಯವಾಗಿದೆ. ಇದು ಆನ್‌ಲೈನ್ ವಂಚನೆಗಳನ್ನು ತಡೆಯಲು ಸಹಕಾರಿಯಾಗುತ್ತದೆ. ಅಲ್ಲದೆ, ಒಂದು ಯುಪಿಐ ಆ್ಯಪ್‌ನಲ್ಲಿ ದಿನಕ್ಕೆ ಗರಿಷ್ಠ 25 ಬ್ಯಾಂಕ್ ಖಾತೆಗಳನ್ನು ಮಾತ್ರ ಲಿಂಕ್ ಮಾಡಬಹುದು ಮತ್ತು ದಿನಕ್ಕೆ 50 ಬಾರಿ ಮಾತ್ರ ಬ್ಯಾಲೆನ್ಸ್ ಚೆಕ್ ಮಾಡಲು ಅವಕಾಶವಿರುತ್ತದೆ.

    ಬ್ಯಾಂಕಿಂಗ್ ಮತ್ತು ಎಟಿಎಂ ಶುಲ್ಕ: ನೀವು ಎಟಿಎಂಗೆ ಹೋಗಿ ಕಾರ್ಡ್ ಇಲ್ಲದೆ ಯುಪಿಐ ಮೂಲಕ ಹಣ ವಿತ್‌ಡ್ರಾ ಮಾಡಿದರೆ, ಅದು ನಿಮ್ಮ ತಿಂಗಳ ಉಚಿತ ವಹಿವಾಟಿನ ಮಿತಿಯಲ್ಲೇ ಲೆಕ್ಕಕ್ಕೆ ಬರುತ್ತದೆ. ಉದಾಹರಣೆಗೆ, ನಿಮ್ಮ ಬ್ಯಾಂಕ್ ತಿಂಗಳಿಗೆ 5 ಬಾರಿ ಉಚಿತವಾಗಿ ಹಣ ತೆಗೆಯಲು ಅವಕಾಶ ನೀಡಿದ್ದರೆ, ಯುಪಿಐ ಮೂಲಕ ತೆಗೆಯುವ ಹಣವೂ ಅದಕ್ಕೆ ಸೇರುತ್ತದೆ. ಒಂದು ವೇಳೆ ನೀವು 5 ಬಾರಿಗಿಂತ ಹೆಚ್ಚು ಹಣ ತೆಗೆದರೆ, ಪ್ರತಿ ಬಾರಿ ₹23 ಮತ್ತು ಅದರ ಮೇಲೆ ತೆರಿಗೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇದು ಎಚ್‌ಡಿಎಫ್‌ಸಿಯಂತಹ ಪ್ರಮುಖ ಬ್ಯಾಂಕ್‌ಗಳಲ್ಲಿ ಇಂದಿನಿಂದಲೇ ಅನ್ವಯವಾಗಲಿದೆ.

    ರೈಲ್ವೆ ಟಿಕೆಟ್ ರದ್ದತಿ ಮತ್ತು ರೀಫಂಡ್ ನಿಯಮ: ರೈಲ್ವೆ ಇಲಾಖೆಯು ಟಿಕೆಟ್ ರದ್ದು ಮಾಡುವ ಸಮಯದ ಮಿತಿಯಲ್ಲಿ ದೊಡ್ಡ ಬದಲಾವಣೆ ಮಾಡಿದೆ. ಇನ್ಮುಂದೆ ರೈಲು ಹೊರಡುವ ಕೇವಲ 8 ಗಂಟೆಗಳ ಮೊದಲು ನೀವು ಟಿಕೆಟ್ ರದ್ದು ಮಾಡಿದರೆ, ನಿಮಗೆ ಪಾವತಿಸಿದ ಹಣದಲ್ಲಿ ಒಂದು ರೂಪಾಯಿಯೂ ವಾಪಸ್ (No Refund) ಸಿಗುವುದಿಲ್ಲ. ಮೊದಲು ಈ ಮಿತಿ 4 ಗಂಟೆ ಇತ್ತು. ಇನ್ನು 8 ರಿಂದ 24 ಗಂಟೆಗಳ ಮೊದಲು ಟಿಕೆಟ್ ಕ್ಯಾನ್ಸಲ್ ಮಾಡಿದರೆ ಶೇ. 50 ರಷ್ಟು ಹಣ ಕಡಿತವಾಗಲಿದೆ. ಪ್ರಯಾಣಿಕರು ಇನ್ಮುಂದೆ ಮೊದಲೇ ಪ್ಲಾನ್ ಮಾಡಿಕೊಳ್ಳುವುದು ಉತ್ತಮ.

    ಪ್ಯಾನ್ ಕಾರ್ಡ್ ಮತ್ತು ಫಾಸ್ಟ್‌ಟ್ಯಾಗ್ (PAN & FASTag): ಹೊಸ ಪ್ಯಾನ್ ಕಾರ್ಡ್ ಪಡೆಯುವ ನಿಯಮ ಕೂಡ ಕಠಿಣವಾಗಿದೆ. ಇನ್ಮುಂದೆ ಕೇವಲ ಆಧಾರ್ ಕಾರ್ಡ್ ಒಂದೇ ಇದ್ದರೆ ಪ್ಯಾನ್ ಕಾರ್ಡ್ ಸಿಗುವುದಿಲ್ಲ. ಅದರ ಜೊತೆಗೆ ನಿಮ್ಮ ಜನ್ಮ ದಿನಾಂಕದ ಸರಿಯಾದ ದಾಖಲೆಗಾಗಿ ಜನನ ಪ್ರಮಾಣ ಪತ್ರ (Birth Certificate) ಅಥವಾ ಪಾಸ್‌ಪೋರ್ಟ್ ನೀಡುವುದು ಕಡ್ಡಾಯವಾಗಿದೆ. ಇನ್ನು ಫಾಸ್ಟ್‌ಟ್ಯಾಗ್ ಬಳಸುವವರಿಗೆ ವಾರ್ಷಿಕ ಪಾಸ್ ಬೆಲೆಯಲ್ಲಿ ಅಲ್ಪ ಏರಿಕೆಯಾಗಿದ್ದು, ₹3,000 ಇದ್ದ ಬೆಲೆ ಈಗ ₹3,075 ಕ್ಕೆ ಏರಿಕೆಯಾಗಿದೆ.

    LEAVE A REPLY

    Please enter your comment!
    Please enter your name here

    error: Content is protected !!