Home ತಾಜಾ ಸುದ್ದಿ US-Israel-Iran War : ಪ್ರತಿಷ್ಠಿತ ವಿಶ್ವವಿದ್ಯಾಲಯದ ಮೇಲೆ ಬಾಂಬ್ ಮಳೆ; 6 ಮಕ್ಕಳು ಸೇರಿ 34...

    US-Israel-Iran War : ಪ್ರತಿಷ್ಠಿತ ವಿಶ್ವವಿದ್ಯಾಲಯದ ಮೇಲೆ ಬಾಂಬ್ ಮಳೆ; 6 ಮಕ್ಕಳು ಸೇರಿ 34 ಮಂದಿ ದುರ್ಮರಣ!

    0
    48
    US-Israel-Iran War: Bombs rain on prestigious university; 34 people died including 6 children!

    ತೆಹ್ರಾನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ನ ‘ಹಾರ್ಮುಜ್ ಜಲಸಂಧಿ’ಯನ್ನು (Strait of Hormuz) ಮಂಗಳವಾರದೊಳಗೆ ತೆರೆಯಬೇಕೆಂದು ನೀಡಿದ್ದ ಗಡುವು ಮುಗಿಯುವ ಮುನ್ನವೇ ಈ ಭೀಕರ ದಾಳಿ ನಡೆದಿದೆ. ಈ ದಾಳಿಯಲ್ಲಿ ಕೇವಲ 10 ವರ್ಷದೊಳಗಿನ 6 ಮುಗ್ಧ ಮಕ್ಕಳು ಸೇರಿದಂತೆ ಒಟ್ಟು 34 ಜನರು ಮೃತಪಟ್ಟಿದ್ದಾರೆ. ಇರಾನ್‌ನ ಪ್ರಮುಖ ನಗರಗಳಾದ ತೆಹ್ರಾನ್, ಕ್ಯೂಮ್ ಮತ್ತು ಬಂದರ್ ಅಬ್ಬಾಸ್ ಸೇರಿದಂತೆ 12ಕ್ಕೂ ಹೆಚ್ಚು ನಗರಗಳ ಮೇಲೆ ಬಾಂಬ್ ಮಳೆ ಸುರಿಸಲಾಗಿದೆ.

    ಪ್ರತಿಷ್ಠಿತ ವಿಶ್ವವಿದ್ಯಾಲಯಕ್ಕೆ ಭಾರಿ ಹಾನಿ: ಇರಾನ್‌ನ ಅತ್ಯಂತ ಪ್ರಸಿದ್ಧ ಮತ್ತು ವಿಜ್ಞಾನ ಸಂಶೋಧನೆಗೆ ಹೆಸರಾದ ‘ಶರೀಫ್ ವಿಶ್ವವಿದ್ಯಾಲಯ’ವನ್ನು (Sharif University) ಗುರಿಯಾಗಿಸಿ ದಾಳಿ ಮಾಡಲಾಗಿದೆ. ಅಮೆರಿಕದ MIT ವಿಶ್ವವಿದ್ಯಾಲಯಕ್ಕೆ ಹೋಲಿಸಲಾಗುವ ಈ ಸಂಸ್ಥೆಯ ಮಸೀದಿ ಮತ್ತು ಸಂಶೋಧನಾ ಪ್ರಯೋಗಾಲಯಗಳು ಸಂಪೂರ್ಣವಾಗಿ ಜಖಂಗೊಂಡಿವೆ. ಯುದ್ಧ ಆರಂಭವಾದಾಗಿನಿಂದ ಇರಾನ್‌ನ ಸುಮಾರು 30 ವಿಶ್ವವಿದ್ಯಾಲಯಗಳ ಮೇಲೆ ಬಾಂಬ್ ದಾಳಿ ನಡೆದಿದೆ ಎಂದು ಅಲ್ಲಿನ ಸರ್ಕಾರ ಮಾಹಿತಿ ನೀಡಿದೆ.

    ಮೂಲಸೌಕರ್ಯಗಳ ಧ್ವಂಸ ಮತ್ತು ಇರಾನ್ ಎಚ್ಚರಿಕೆ: ಕೇವಲ ಸೇನಾ ನೆಲೆಗಳ ಮೇಲೆ ಮಾತ್ರವಲ್ಲದೆ, ಇರಾನ್‌ನ ಸಾಮಾನ್ಯ ಜನರ ವಸತಿ ಪ್ರದೇಶಗಳು, ವಿದ್ಯುತ್ ಸ್ಥಾವರಗಳು, ರಸ್ತೆಗಳು ಮತ್ತು ಸೇತುವೆಗಳನ್ನು ಈ ದಾಳಿಯಲ್ಲಿ ಟಾರ್ಗೆಟ್ ಮಾಡಲಾಗಿದೆ. ಈ ಅಮಾನವೀಯ ಕೃತ್ಯವನ್ನು ಇರಾನ್ “ಯುದ್ಧಾಪರಾಧ” ಎಂದು ಕರೆದಿದ್ದು, ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ತಕ್ಕ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಎಚ್ಚರಿಸಿದೆ. ಇರಾನ್ ಸಹ ಪ್ರತಿಯಾಗಿ ಇಸ್ರೇಲ್‌ನ ಟೆಲ್ ಅವಿವ್ ಮತ್ತು ಹೈಫಾ ನಗರಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದು, ಅಲ್ಲಿಯೂ ಸಾವು-ನೋವು ಸಂಭವಿಸಿದೆ ಎಂದು ವರದಿಯಾಗಿದೆ.

    LEAVE A REPLY

    Please enter your comment!
    Please enter your name here

    error: Content is protected !!