Thursday, April 9, 2026
Homeತಾಜಾ ಸುದ್ದಿGreenland Threat : ರುಟ್ಟೆ ಅವರನ್ನು ಭೇಟಿಯಾದ ನಂತರ ಟ್ರಂಪ್ ಇರಾನ್ ವಿರುದ್ಧ ನ್ಯಾಟೋವನ್ನು ಟೀಕಿಸಿದರು,...

Greenland Threat : ರುಟ್ಟೆ ಅವರನ್ನು ಭೇಟಿಯಾದ ನಂತರ ಟ್ರಂಪ್ ಇರಾನ್ ವಿರುದ್ಧ ನ್ಯಾಟೋವನ್ನು ಟೀಕಿಸಿದರು, ಗ್ರೀನ್‌ಲ್ಯಾಂಡ್ ಬೆದರಿಕೆಯನ್ನು ನವೀಕರಿಸಿದರು

ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನೇಟೋ (NATO) ಮೈತ್ರಿಕೂಟದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇರಾನ್ ವಿರುದ್ಧದ ಯುದ್ಧದಲ್ಲಿ ಅಮೆರಿಕಕ್ಕೆ ಬೆಂಬಲ ನೀಡಲು ನೇಟೋ ರಾಷ್ಟ್ರಗಳು ಹಿಂಜರಿಯುತ್ತಿರುವುದಕ್ಕೆ ಟ್ರಂಪ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನೇಟೋ ಮುಖ್ಯಸ್ಥ ಮಾರ್ಕ್ ರುಟ್ಟೆ ಅವರೊಂದಿಗೆ ಶ್ವೇತಭವನದಲ್ಲಿ ನಡೆಸಿದ ಎರಡು ಗಂಟೆಗಳ ಸುದೀರ್ಘ ಸಭೆಯ ನಂತರ ಟ್ರಂಪ್ ತಮ್ಮ ‘ಟ್ರೂತ್ ಸೋಶಿಯಲ್’ (TruthSocial) ಖಾತೆಯಲ್ಲಿ ಸ್ಫೋಟಕ ಹೇಳಿಕೆಗಳನ್ನು ನೀಡಿದ್ದು, “ನಮಗೆ ಅಗತ್ಯವಿದ್ದಾಗ ನೇಟೋ ನಮ್ಮ ಜೊತೆಗಿರಲಿಲ್ಲ, ಮುಂದೆಯೂ ಅವರು ಇರುತ್ತಾರೆ ಎಂಬ ನಂಬಿಕೆಯಿಲ್ಲ” ಎಂದು ಕಿಡಿಕಾರಿದ್ದಾರೆ. ಇರಾನ್ ವಿರುದ್ಧದ ಕಾರ್ಯಾಚರಣೆಗೆ ಹಲವು ನೇಟೋ ರಾಷ್ಟ್ರಗಳು ತಮ್ಮ ವಾಯುಪ್ರದೇಶವನ್ನು ಬಳಸಲು ಅಮೆರಿಕಕ್ಕೆ ನಿರಾಕರಿಸಿದ್ದೇ ಟ್ರಂಪ್ ಅವರ ಈ ಆಕ್ರೋಶಕ್ಕೆ ಪ್ರಮುಖ ಕಾರಣವಾಗಿದೆ.

ನೇಟೋ ಮುಖ್ಯಸ್ಥ ಮಾರ್ಕ್ ರುಟ್ಟೆ ಅವರು ಟ್ರಂಪ್ ಅವರ ಅಸಮಾಧಾನವನ್ನು ಶಮನಗೊಳಿಸಲು ಪ್ರಯತ್ನಿಸಿದ್ದು, ಬಹುತೇಕ ಯುರೋಪಿಯನ್ ರಾಷ್ಟ್ರಗಳು ಲಾಜಿಸ್ಟಿಕ್ಸ್ ಮತ್ತು ತಳಹದಿ ನೀಡುವ ಮೂಲಕ ಅಮೆರಿಕಕ್ಕೆ ಸಹಾಯ ಮಾಡಿವೆ ಎಂದು ಸಮರ್ಥಿಸಿಕೊಂಡಿದ್ದಾರೆ. ಆದರೆ ಈ ಸಂಧಾನ ಪ್ರಯತ್ನಕ್ಕೆ ಬಗ್ಗದ ಟ್ರಂಪ್, ಸಭೆಯ ನಂತರ ಡೆನ್ಮಾರ್ಕ್‌ನಿಂದ ‘ಗ್ರೀನ್‌ಲ್ಯಾಂಡ್’ ಅನ್ನು ವಶಪಡಿಸಿಕೊಳ್ಳುವ ಹಳೆಯ ಪ್ರಸ್ತಾಪವನ್ನು ಮತ್ತೆ ಕೆದಕಿದ್ದಾರೆ. “ಆ ಬೃಹತ್ ಮಂಜುಗಡ್ಡೆಯ ತುಂಡನ್ನು (ಗ್ರೀನ್‌ಲ್ಯಾಂಡ್) ನೆನಪಿಸಿಕೊಳ್ಳಿ” ಎಂದು ಬರೆಯುವ ಮೂಲಕ ನೇಟೋ ಮಿತ್ರರಾಷ್ಟ್ರಗಳಿಗೆ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೆ, ಯುದ್ಧದ ಸಮಯದಲ್ಲಿ ತಮಗೆ ಸಹಾಯ ಮಾಡದ ನೇಟೋ ಸದಸ್ಯ ರಾಷ್ಟ್ರಗಳಿಂದ ಅಮೆರಿಕನ್ ಸೈನಿಕರನ್ನು ಹಿಂಪಡೆಯುವ ಬಗ್ಗೆಯೂ ಟ್ರಂಪ್ ಆಲೋಚಿಸುತ್ತಿದ್ದಾರೆ ಎಂದು ವರದಿಯಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!