Home ತಾಜಾ ಸುದ್ದಿ Mia Khalifa : ‘ಇದು ಅತ್ಯಂತ ನೋವಿನ ದಿನ’; ಕಣ್ಣೀರಿಟ್ಟ ಮಿಯಾ ಖಲೀಫಾ!

    Mia Khalifa : ‘ಇದು ಅತ್ಯಂತ ನೋವಿನ ದಿನ’; ಕಣ್ಣೀರಿಟ್ಟ ಮಿಯಾ ಖಲೀಫಾ!

    0
    78
    Mia Khalifa: 'This is the most painful day'; Mia Khalifa in tears!

    ಲೆಬನಾನ್ :  ಸುಮಾರು 40 ದಿನಗಳ ಭೀಕರ ಯುದ್ಧದ ಬಳಿಕ ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವೆ ಕದನ ವಿರಾಮ ಘೋಷಣೆಯಾಗಿದೆ. ಆದರೆ, ಈ ಒಪ್ಪಂದದ ಬೆನ್ನಲ್ಲೇ ಇಸ್ರೇಲ್ ಲೆಬನಾನ್ ಮೇಲೆ ಅನಿರೀಕ್ಷಿತ ವೈಮಾನಿಕ ದಾಳಿ ನಡೆಸಿದ್ದು, ಈ ರಕ್ತಪಾತದಲ್ಲಿ 250ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಭೀಕರ ದಾಳಿಯ ಬಳಿಕ ನೀಲಿ ಚಿತ್ರಗಳ ಮಾಜಿ ತಾರೆ ಮಿಯಾ ಖಲೀಫಾ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಕಣ್ಣೀರು ಹಾಕುತ್ತಾ ಅಳಲು ತೋಡಿಕೊಂಡಿದ್ದಾರೆ. ಸದ್ಯ ಅಮೆರಿಕದಲ್ಲಿ ನೆಲೆಸಿರುವ ಮಿಯಾ ಖಲೀಫಾ ಅವರು ಮೂಲತಃ ಲೆಬನಾನ್‌ನವರಾಗಿದ್ದು, ತಮ್ಮ ತಾಯ್ನಾಡಿನ ಮೇಲೆ ನಡೆದ ಈ ಬಾಂಬ್ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ.

    ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವೀಡಿಯೋದಲ್ಲಿ ಅಳುತ್ತಲೇ ಮಾತನಾಡಿರುವ ಮಿಯಾ ಖಲೀಫಾ, “ಇದು ಅತ್ಯಂತ ನೋವಿನ ದಿನ. ಇಷ್ಟು ವರ್ಷಗಳಲ್ಲಿ ನಾವು ಸಾಮಾಜಿಕ ಜಾಲತಾಣದಲ್ಲಿ ಇಂತಹ ದಾಳಿಗಳನ್ನು ನೋಡಿಯೇ ಇಲ್ಲ. ಇದು ನರಮೇಧದಂತೆ ನಡೆಯುತ್ತಿದೆ. ಕಳೆದೊಂದು ದಶಕದಲ್ಲಿ ಇಂತಹ ಭೀಕರತೆಯನ್ನು ಯಾರೂ ನೋಡಿಲ್ಲ. ಕೇವಲ 10 ನಿಮಿಷಗಳಲ್ಲಿ 160 ವಾಯುದಾಳಿಗಳನ್ನು ಲೆಬನಾನ್ ಮೇಲೆ ಮಾಡಲಾಗಿದೆ. ಕದನ ವಿರಾಮದ ಅವಧಿಯಲ್ಲೇ ಇಸ್ರೇಲ್ ಉದ್ದೇಶಪೂರ್ವಕವಾಗಿ ಶಾಲೆ, ಆಸ್ಪತ್ರೆ, ಸಾರ್ವಜನಿಕ ವಸತಿ ಪ್ರದೇಶಗಳು ಮತ್ತು ಸ್ಮಶಾನಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ” ಎಂದು ಆಕ್ರೋಶ ಹೊರಹಾಕಿದ್ದಾರೆ.

    ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ ಮಿಯಾ, “ನನ್ನ ತೆರಿಗೆ ಹಣವನ್ನು (ಅಮೆರಿಕದಲ್ಲಿ ಪಾವತಿಸುವ ಹಣ) ನನ್ನ ಮಾತೃಭೂಮಿಯನ್ನು ಧ್ವಂಸ ಮಾಡಲು ಬಳಸಲಾಗುತ್ತಿದೆ. ಇದಕ್ಕೆ ನಾನು ಹೇಗೆ ಪ್ರತಿಕ್ರಿಯಿಸಬೇಕು ಎಂದು ಅರ್ಥವಾಗುತ್ತಿಲ್ಲ. ನನಗೆ ಏನು ಹೇಳಬೇಕೆಂದು ತೋಚುತ್ತಿಲ್ಲ, ಪದಗಳೇ ಸಿಗುತ್ತಿಲ್ಲ. ಇಷ್ಟು ದಿನ ನನಗೆ ಸರಿ ಎನಿಸುವ ಬೇರೆಯವರ ಅಭಿಪ್ರಾಯಗಳನ್ನು ನಾನು ಹಂಚಿಕೊಳ್ಳುತ್ತಿದ್ದೆ, ಆದರೆ ಇಂದು ನಾನೇ ನೇರವಾಗಿ ಮಾತನಾಡುತ್ತಿದ್ದೇನೆ” ಎಂದು ಭಾವುಕರಾಗಿ ನುಡಿದಿದ್ದಾರೆ. ಮಿಯಾ ಖಲೀಫಾ ಅವರ ಈ ವೀಡಿಯೋ ಈಗ ಜಾಗತಿಕ ಮಟ್ಟದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಲೆಬನಾನ್ ಮೇಲಿನ ದಾಳಿಯ ಕ್ರೌರ್ಯವನ್ನು ಜಗತ್ತಿಗೆ ಸಾರುತ್ತಿದೆ.

    LEAVE A REPLY

    Please enter your comment!
    Please enter your name here

    error: Content is protected !!