Home ತಾಜಾ ಸುದ್ದಿ Reels Craze | ರೀಲ್ಸ್ ಹುಚ್ಚಿಗೆ ಮಗುವಿನ ಪ್ರಾಣವನ್ನೇ ಪಣಕ್ಕಿಟ್ಟ ತಂದೆ!: ಮೊದಲ ಮಹಡಿಯಿಂದ ಮಗುವನ್ನು...

    Reels Craze | ರೀಲ್ಸ್ ಹುಚ್ಚಿಗೆ ಮಗುವಿನ ಪ್ರಾಣವನ್ನೇ ಪಣಕ್ಕಿಟ್ಟ ತಂದೆ!: ಮೊದಲ ಮಹಡಿಯಿಂದ ಮಗುವನ್ನು ಕೆಳಕ್ಕೆ ಜಿಗಿಯುವಂತೆ ಪ್ರೇರೇಪಿಸಿದ ಅಪ್ಪ; ವಿಡಿಯೋ ವೈರಲ್!

    0
    69
    Reels Craze | Father risks his child's life for Reels Craze!: Dad encourages child to jump from first floor; Video goes viral!

    ನವದೆಹಲಿ : ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೀಕ್ಷಣೆ (Views) ಮತ್ತು ಲೈಕ್ಸ್ ಪಡೆಯಲು ಜನರು ಎಂತಹ ಅಪಾಯಕಾರಿ ಕೆಲಸಕ್ಕೂ ಕೈಹಾಕುತ್ತಿದ್ದಾರೆ. ಇದಕ್ಕೆ ಸಾಕ್ಷಿಯೆಂಬಂತೆ, ತಂದೆಯೇ ತನ್ನ ಪುಟ್ಟ ಮಗುವನ್ನು ಮೊದಲ ಮಹಡಿಯ ಬಾಲ್ಕನಿಯಿಂದ ಕೆಳಕ್ಕೆ ಜಿಗಿಯುವಂತೆ ಪ್ರೇರೇಪಿಸಿದ ಅಘಾತಕಾರಿ ಘಟನೆಯ ವಿಡಿಯೋವೊಂದು ಈಗ ‘X’ (ಟ್ವಿಟ್ಟರ್) ನಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

     

    ವೈರಲ್ ಆಗಿರುವ ಈ ವಿಡಿಯೋದಲ್ಲಿ, ಸುಮಾರು ಎರಡರಿಂದ ಮೂರು ವರ್ಷ ವಯಸ್ಸಿನ ಪುಟ್ಟ ಬಾಲಕನೊಬ್ಬ ಮೊದಲ ಮಹಡಿಯ ಬಾಲ್ಕನಿಯ ರೇಲಿಂಗ್ ಮೇಲೆ ನಿಂತಿರುವುದು ಕಂಡುಬರುತ್ತದೆ. ಕೆಳಗೆ ನಿಂತಿರುವ ತಂದೆಯು ಮಗುವಿಗೆ ಕೆಳಕ್ಕೆ ಹಾರುವಂತೆ ಕೈಸನ್ನೆ ಮಾಡಿ ಪ್ರೋತ್ಸಾಹಿಸುತ್ತಾನೆ. ತಂದೆಯ ಮಾತನ್ನು ನಂಬಿದ ಮಗು, ಯಾವುದೇ ಭಯವಿಲ್ಲದೆ ನಗುತ್ತಾ ಚಪ್ಪಾಳೆ ತಟ್ಟುತ್ತಾ ಮೇಲಿಂದ ಕೆಳಕ್ಕೆ ಹಾರುತ್ತದೆ.

    ಮಗು ಮೇಲಿಂದ ಹಾರಿದ ತಕ್ಷಣ ಕೆಳಗೆ ನಿಂತಿದ್ದ ತಂದೆ ಮಗುವನ್ನು ಹಿಡಿಯಲು ಪ್ರಯತ್ನಿಸುತ್ತಾನೆ. ಆದರೆ ವೇಗವಾಗಿ ಬಂದ ಮಗು ತಂದೆಯ ಕೈಯಿಂದ ಜಾರಿ ಕೆಳಗೆ ಬೀಳುತ್ತದೆ. ಅದೃಷ್ಟವಶಾತ್, ಮಗು ಬೀಳುವ ಜಾಗದಲ್ಲಿ ಹಾಸಿಗೆಯನ್ನು ಮೊದಲೇ ಹಾಸಿಟ್ಟಿದ್ದರಿಂದ ಮಗುವಿಗೆ ಯಾವುದೇ ಪ್ರಾಣಾಪಾಯ ಅಥವಾ ಗಂಭೀರ ಗಾಯಗಳಾಗಿಲ್ಲ. ಮಗುವಿನ ಪ್ರಾಣದ ಜೊತೆ ಈ ರೀತಿ ಚೆಲ್ಲಾಟವಾಡಿದ ತಂದೆಯ ಬೇಜವಾಬ್ದಾರಿತನದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ. “ರೀಲ್ಸ್‌ಗಾಗಿ ಎಂತಹ ಹಂತಕ್ಕೂ ಹೋಗುವುದು ನಿಜಕ್ಕೂ ಮೂರ್ಖತನ” ಎಂದು ನೆಟ್ಟಿಗರು ಈ ವಿಡಿಯೋವನ್ನು ಹಂಚಿಕೊಂಡು ಆಕ್ರೋಶ ಹೊರಹಾಕಿದ್ದಾರೆ.

    LEAVE A REPLY

    Please enter your comment!
    Please enter your name here

    error: Content is protected !!