Home LOCAL A young woman from Sullia dies in Kurnool :ಕರ್ನೂಲ್‌ನಲ್ಲಿ ಸುಳ್ಯದ ಯುವತಿ ದುರ್ಮರಣ:...

A young woman from Sullia dies in Kurnool :ಕರ್ನೂಲ್‌ನಲ್ಲಿ ಸುಳ್ಯದ ಯುವತಿ ದುರ್ಮರಣ: ಮರಕ್ಕೆ ಡಿಕ್ಕಿ ಹೊಡೆದ ಕಾರ್; ಪ್ರವಾಸಕ್ಕೆಂದು ಹೋಗಿದ್ದ ಸಾಫ್ಟ್‌ವೇರ್ ಇಂಜಿನಿಯರ್ ಶಿಪ್ರಾ ಇನ್ನಿಲ್ಲ!

0
43

ಆಂಧ್ರಪ್ರದೇಶ :ಆಂಧ್ರಪ್ರದೇಶದಲ್ಲಿ ಭೀಕರ ಅಪಹಾತ: ಸುಳ್ಯ ಮೂಲದ 27 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ಸಾವು!; ಪ್ರವಾಸಕ್ಕೆ ಹೋಗಿದ್ದಾಗ ಸಂಭವಿಸಿದ ದುರಂತ!

ಸುಳ್ಯ: ಗೆಳೆಯರೊಂದಿಗೆ ಪ್ರವಾಸಕ್ಕೆಂದು ಆಂಧ್ರಪ್ರದೇಶಕ್ಕೆ ತೆರಳಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಮೂಲದ ಪ್ರತಿಭಾವಂತ ಯುವತಿಯೊಬ್ಬರು ಕರ್ನೂಲ್ ಬಳಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಶಿಪ್ರಾ (27) ಮೃತಪಟ್ಟ ದುರ್ದೈವಿ.

ಘಟನೆಯ ವಿವರ: ಸುಳ್ಯದ ಕಂದಡ್ಕ ನಿವಾಸಿ ಶಶಿಕಲಾ ಭಟ್ ಅವರ ಏಕೈಕ ಪುತ್ರಿ ಶಿಪ್ರಾ, ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಶನಿವಾರ ರಾತ್ರಿ ಸಹೋದ್ಯೋಗಿಗಳ ಜೊತೆ ಆಂಧ್ರಪ್ರದೇಶಕ್ಕೆ ಪ್ರವಾಸಕ್ಕೆ ಹೋಗಿದ್ದಾಗ ಈ ದುರಂತ ಸಂಭವಿಸಿದೆ. ಕಾರು ಚಲಾಯಿಸುತ್ತಿದ್ದ ಚಾಲಕನಿಗೆ ನಿದ್ದೆ ಮಂಪರು ಆವರಿಸಿದ್ದರಿಂದ ನಿಯಂತ್ರಣ ತಪ್ಪಿದ ವಾಹನವು ರಸ್ತೆ ಬದಿಯ ಮರಕ್ಕೆ ವೇಗವಾಗಿ ಡಿಕ್ಕಿ ಹೊಡೆದಿದೆ.

ಸ್ಥಳದಲ್ಲೇ ಸಾವು: ಡಿಕ್ಕಿಯ ರಭಸಕ್ಕೆ ಶಿಪ್ರಾ ಅವರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಅವರು ಕೊನೆಯುಸಿರೆಳೆದಿದ್ದಾರೆ. ಕಾರಿನಲ್ಲಿದ್ದ ಇತರ ಮೂವರು ಸಹೋದ್ಯೋಗಿಗಳಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಕರ್ನೂಲ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿಪ್ರಾ ಅವರು ಸುಳ್ಯದ ಕೆವಿಜಿ ಕಾಲೇಜಿನಲ್ಲಿ ಡಿಪ್ಲೊಮಾ ಮುಗಿಸಿ, ನಿಟ್ಟೆಯಲ್ಲಿ ಎಂಟೆಕ್ ಪದವಿ ಪಡೆದಿದ್ದರು.

ತಂದೆಯನ್ನು ಮೊದಲೇ ಕಳೆದುಕೊಂಡಿದ್ದ ಶಿಪ್ರಾ, ತಾಯಿ ಶಶಿಕಲಾ ಅವರಿಗೆ ಆಧಾರವಾಗಿದ್ದರು. ಸದ್ಯ ಬೆಂಗಳೂರಿನಲ್ಲಿ ತಾಯಿಯ ಜೊತೆಗೇ ವಾಸವಿದ್ದ ಶಿಪ್ರಾ ಅವರ ಅಕಾಲಿಕ ಮರಣದಿಂದಾಗಿ ಕಂದಡ್ಕದ ಮನೆಯಲ್ಲಿ ನೀರವ ಮೌನ ಆವರಿಸಿದೆ. ಪ್ರತಿಭಾವಂತ ಮಗಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನು ಓದಿ : serial fraud |ಮದುವೆ ಹೆಸರಲ್ಲಿ ಕಾಮುಕ ಟೆಕ್ಕಿಯ ‘ಸರಣಿ ವಂಚನೆ’!ಇಬ್ಬರು ಪತ್ನಿಯರಿದ್ದರೂ 3ನೇ ಮದುವೆಗೆ ರೆಡಿಯಾಗಿದ್ದ ರವಿ ಜಿಗಣಿ ಇಂಜಿನಿಯರ್ ಬಣ್ಣ ಬಯಲು ಮಾಡಿದ ಗರ್ಭಿಣಿ ಪತ್ನಿ!

LEAVE A REPLY

Please enter your comment!
Please enter your name here

error: Content is protected !!