Home LOCAL Sullia : ಸುಳ್ಯದ 20 ಅಡಿ ಬಾವಿಯಿಂದ 16 ಗಂಟೆಗಳ ಕಾರ್ಯಾಚರಣೆಯ ನಂತರ ಆನೆಯನ್ನು ರಕ್ಷಿಸಲಾಗಿದೆ

Sullia : ಸುಳ್ಯದ 20 ಅಡಿ ಬಾವಿಯಿಂದ 16 ಗಂಟೆಗಳ ಕಾರ್ಯಾಚರಣೆಯ ನಂತರ ಆನೆಯನ್ನು ರಕ್ಷಿಸಲಾಗಿದೆ

0
89
Sullia: Elephant rescued from 20-foot well in Sullia after 16-hour operation

ಸುಳ್ಯ: ತಾಲೂಕಿನ ಪೆರಾಜೆ ಗ್ರಾಮದಲ್ಲಿ ಸೋಮವಾರ ಮುಂಜಾನೆ ದಾರಿತಪ್ಪಿ ಬಂದಿದ್ದ ಸುಮಾರು 30 ವರ್ಷದ ಒಂಟಿ ಸಲಗವೊಂದು 20 ಅಡಿ ಆಳದ ಪಾಳುಬಿದ್ದ ಬಾವಿಗೆ ಬಿದ್ದು ಸಂಕಷ್ಟಕ್ಕೆ ಸಿಲುಕಿತ್ತು. ಅರಣ್ಯ ಇಲಾಖೆಯ ಸಿಬ್ಬಂದಿಗಳು ಸತತ 16 ಗಂಟೆಗಳ ಕಾಲ ಸವಾಲಿನ ಕಾರ್ಯಾಚರಣೆ ನಡೆಸಿ, ಆನೆಯನ್ನು ಸುರಕ್ಷಿತವಾಗಿ ಹೊರತರಲು ಯಶಸ್ವಿಯಾಗಿದ್ದಾರೆ.

ಸಂಪಾಜೆ ಅರಣ್ಯ ವಲಯದಿಂದ ಆಹಾರ ಅರಸಿ ಬಂದಿದ್ದ ಈ ಕಾಡಾನೆ ಸೋಮವಾರ ಬೆಳಗಿನ ಜಾವ ಆಕಸ್ಮಿಕವಾಗಿ ಬಾವಿಗೆ ಬಿದ್ದಿತ್ತು. ಆರಂಭದಲ್ಲಿ ಇದು ಆನೆ ಮರಿ ಇರಬಹುದು ಎಂದು ಅರಣ್ಯ ಅಧಿಕಾರಿಗಳು ಶಂಕಿಸಿದ್ದರು. ಆದರೆ ಕಾರ್ಯಾಚರಣೆ ಅರ್ಧ ಹಂತ ತಲುಪಿದಾಗ ಅದು ಬೃಹತ್ ಸಲಗ ಎಂಬುದು ದೃಢಪಟ್ಟಿತು. ಬಾವಿಯೊಳಗೆ ಸಿಲುಕಿದ್ದ ಆನೆ ಹೊರಬರಲಾರದೆ ಹರಸಾಹಸ ಪಡುತ್ತಿತ್ತು.

 ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ತಂಡವು ಜೆಸಿಬಿ ಯಂತ್ರಗಳ ಸಹಾಯದಿಂದ ಬಾವಿಯ ಒಂದು ಬದಿಯನ್ನು ಅಗೆದು ಮಣ್ಣಿನ ರಾಂಪ್ (Ramp) ನಿರ್ಮಿಸಿತು. ಸಂಜೆ 4 ಗಂಟೆಯ ಸುಮಾರಿಗೆ ಆನೆಯು ಈ ಹಾದಿಯ ಮೂಲಕ ಮೆಲ್ಲನೆ ನಡೆದುಕೊಂಡು ಬಾವಿಯಿಂದ ಹೊರಬಂದಿತು. ಅದೃಷ್ಟವಶಾತ್ ಆನೆಗೆ ಯಾವುದೇ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಾವಿಯಿಂದ ಹೊರಬಂದ ಆನೆಯು ನೇರವಾಗಿ ಅರಣ್ಯಕ್ಕೆ ಹೋಗುವ ಬದಲು ಸಮೀಪದ ತೋಟಗಳತ್ತ ಮುಖ ಮಾಡಿದೆ. ಇದರಿಂದಾಗಿ ಅರಣ್ಯ ಇಲಾಖೆ ಸಿಬ್ಬಂದಿಗಳು ಹದ್ದಿನ ಕಣ್ಣಿಟ್ಟಿದ್ದು, ಆನೆಯನ್ನು ಮರಳಿ ಕಾಡಿಗೆ ಓಡಿಸಲು ಪ್ರಯತ್ನಿಸುತ್ತಿದ್ದಾರೆ. ಸಮಯಪ್ರಜ್ಞೆ ಮೆರೆದು ಆನೆಯನ್ನು ರಕ್ಷಿಸಿದ ಅರಣ್ಯ ತಂಡದ ಕಾರ್ಯಕ್ಕೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here

error: Content is protected !!