HomeLOCALBantwal : ಬೆಂಗಳೂರಿನಿಂದ ಹೊರಟ ರೈಲಿನಲ್ಲಿ ಬಿಸಿ ರೋಡ್ ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ...

Bantwal : ಬೆಂಗಳೂರಿನಿಂದ ಹೊರಟ ರೈಲಿನಲ್ಲಿ ಬಿಸಿ ರೋಡ್ ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ

ಬಂಟ್ವಾಳ, ಏಪ್ರಿಲ್ 27 : ಬಂಟ್ವಾಳ ತಾಲೂಕಿನ ಬಿ.ಸಿ ರೋಡ್ ರೈಲ್ವೇ ನಿಲ್ದಾಣದಲ್ಲಿ ಭಾನುವಾರ ರಾತ್ರಿ ಚಲಿಸುವ ರೈಲಿನ ಬೋಗಿಯಲ್ಲೇ ಗರ್ಭಿಣಿಯೊಬ್ಬರು ಮಗುವಿಗೆ ಜನ್ಮ ನೀಡಿದ ಸುಂದರ ಮತ್ತು ಮಾನವೀಯ ಘಟನೆ ನಡೆದಿದೆ. ಮೈಸೂರಿನ ಸವಣೂರು ನಿವಾಸಿ ಪೊನ್ನಮ್ಮ ಎಂಬುವವರು ರೈಲಿನಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ.

ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ರೈಲಿನಲ್ಲಿ ಪೊನ್ನಮ್ಮ ಪ್ರಯಾಣಿಸುತ್ತಿದ್ದರು. ರೈಲು ಹೊರಟ ಸ್ವಲ್ಪ ಸಮಯದಲ್ಲೇ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಈ ವೇಳೆ ಪೊನ್ನಮ್ಮ ಅವರ ಸ್ಥಿತಿಯನ್ನು ಕಂಡು ಅದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮುಸ್ಲಿಂ ಮಹಿಳೆಯರ ತಂಡವೊಂದು ತಕ್ಷಣ ಸಹಾಯಕ್ಕೆ ಧಾವಿಸಿ, ರೈಲ್ವೇ ಅಧಿಕಾರಿಗಳನ್ನು ಎಚ್ಚರಿಸಿದರು. ಕೂಡಲೇ ರೈಲನ್ನು ಬಿ.ಸಿ ರೋಡ್ ನಿಲ್ದಾಣದಲ್ಲಿ ನಿಲ್ಲಿಸಿ, ಸ್ಥಳೀಯ ಸೋಮಯಾಜಿ ಆಸ್ಪತ್ರೆಯ ವೈದ್ಯರನ್ನು ಕರೆಸಲಾಯಿತು.

ವೈದ್ಯಕೀಯ ತಂಡವು ಅತ್ಯಂತ ಚಾಣಾಕ್ಷತನದಿಂದ ರೈಲಿನ ಬೋಗಿಯಲ್ಲೇ ಹೆರಿಗೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ಪೊನ್ನಮ್ಮ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ನವಜಾತ ಶಿಶುವನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಹೆಚ್ಚಿನ ಆರೈಕೆಗಾಗಿ ದಾಖಲಿಸಲಾಗಿದೆ. ಈ ಸಂದರ್ಭದಲ್ಲಿ ಕಲ್ಲಡ್ಕದ ಸುಜ್ಞಾನ ಆಂಬ್ಯುಲೆನ್ಸ್ ಚಾಲಕ ಲೋಕೇಶ್, ಕೈಕಂಬದ ಸಮದ್ ಮತ್ತು ಬಂಟ್ವಾಳ ನಗರ ಪೊಲೀಸರು ನೆರವಿಗೆ ನಿಂತು ಮಾನವೀಯತೆ ಮೆರೆದಿದ್ದಾರೆ.

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments