Monday, May 11, 2026
Homeತಾಜಾ ಸುದ್ದಿBangalore : ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ತಾಯಿ

Bangalore : ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ತಾಯಿ

ಬೆಂಗಳೂರು : ಯಶವಂತಪುರದ ಮಥಿಕೆರೆ ನಿವಾಸಿಗಳಾದ ಪವಿತ್ರಾ (24) ಎಂಬಾಕೆ ತನ್ನ ಇಬ್ಬರು ಮಕ್ಕಳಾದ ನಿವೇದ್ (4) ಮತ್ತು ನಿರ್ಮಲ್ (2) ಅವರಿಗೆ ಹಾಲಿನಲ್ಲಿ ಇಲಿ ಪಾಷಾಣ (ವಿಷ) ಬೆರೆಸಿ ಕುಡಿಸಿದ್ದಾಳೆ. ಈ ಕೃತ್ಯದ ಬಳಿಕ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಪವಿತ್ರಾ ಮತ್ತು ಪತಿ ಪ್ರಶಾಂತ್ ಅವರ ನಡುವೆ ಕ್ಷುಲ್ಲಕ ವಿಚಾರಕ್ಕೆ ಶನಿವಾರ ಸಂಜೆ ಜಗಳ ನಡೆದಿತ್ತು. ಪ್ರಶಾಂತ್ ಮನೆಯಿಂದ ಹೊರಗೆ ಹೋದ ನಂತರ, ಜಗಳದಿಂದ ಬೇಸತ್ತ ಪವಿತ್ರಾ ರಾತ್ರಿಯೇ ಈ ಕ್ರೂರ ನಿರ್ಧಾರ ತೆಗೆದುಕೊಂಡಿದ್ದಾಳೆ.

ತಡರಾತ್ರಿ ಮನೆಗೆ ಬಂದ ಪ್ರಶಾಂತ್, ಪತ್ನಿ ಮತ್ತು ಮಕ್ಕಳು ಮಲಗಿದ್ದಾರೆಂದು ಭಾವಿಸಿ ಮೌನವಾಗಿದ್ದನು. ಆದರೆ ಭಾನುವಾರ ಬೆಳಿಗ್ಗೆ ಮಕ್ಕಳು ಎಚ್ಚರಗೊಳ್ಳದಿದ್ದಾಗ ಗಾಬರಿಯಾದ ಪ್ರಶಾಂತ್, ವಿಚಾರಿಸಿದಾಗ ಪತ್ನಿ ಪವಿತ್ರಾ, ತಾನು ಮಕ್ಕಳಿಗೆ ವಿಷ ಕುಡಿಸಿರುವುದಾಗಿ ಒಪ್ಪಿಕೊಂಡಿದ್ದಾಳೆ. ತಕ್ಷಣ ಆಸ್ಪತ್ರೆಗೆ ಕರೆದೊಯ್ದರೂ, ಅಷ್ಟರಲ್ಲೇ ಮಕ್ಕಳು ಮೃತಪಟ್ಟಿದ್ದಾರೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.

ಆರೋಪಿ ಪವಿತ್ರಾಳ ಸ್ಥಿತಿ ಗಂಭೀರವಾಗಿದ್ದು, ಸದ್ಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಘಟನೆಯ ಕುರಿತು ಪತಿ ಪ್ರಶಾಂತ್ ಅವರಿಂದ ದೂರು ಸ್ವೀಕರಿಸಿರುವ ಯಶವಂತಪುರ ಪೊಲೀಸರು, ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಕೌಟುಂಬಿಕ ಕಲಹಗಳು ಇಂತಹ ದಾರುಣ ಮಟ್ಟಕ್ಕೆ ತಲುಪಬಾರದು ಎಂಬುದು ಈ ಘಟನೆ ಸಮಾಜಕ್ಕೆ ನೀಡುತ್ತಿರುವ ಒಂದು ನೋವಿನ ಪಾಠವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!