Monday, May 11, 2026
Homeತಾಜಾ ಸುದ್ದಿMoodbidri : ಕಾರಿಗೆ ಡಿಕ್ಕಿ ಹೊಡೆದ ಮಿನಿ ಬಸ್; ಪವಾಡಸದೃಶ ರೀತಿಯಲ್ಲಿ ಪಾರಾದ ಪ್ರಯಾಣಿಕರು

Moodbidri : ಕಾರಿಗೆ ಡಿಕ್ಕಿ ಹೊಡೆದ ಮಿನಿ ಬಸ್; ಪವಾಡಸದೃಶ ರೀತಿಯಲ್ಲಿ ಪಾರಾದ ಪ್ರಯಾಣಿಕರು

ಮೂಡುಬಿದಿರೆ, ಮೇ 9 : ಮೂಡುಬಿದಿರೆಯ ಸಮಾಗರಗುಂಡಿಯ ಬಲ್ಲಾಳ್ ಹೋಟೆಲ್ ಬಳಿ ಶನಿವಾರ, ಮೇ 9 ರಂದು ಮಿನಿ ಬಸ್ಸೊಂದು ಕಾರಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಕಾರು ತೀವ್ರವಾಗಿ ಜಖಂಗೊಂಡಿದ್ದು, ಕಾರಿನಲ್ಲಿದ್ದ ಮಹಿಳೆಯರು ಸೇರಿದಂತೆ ಸುಮಾರು ಐವರು ಪ್ರಯಾಣಿಕರು ಯಾವುದೇ ಗಾಯಗಳಿಲ್ಲದೆ ಪವಾಡಸದೃಶವಾಗಿ ಪಾರಾಗಿದ್ದಾರೆ.

ಅಪಘಾತ ಸಂಭವಿಸಿದ್ದು ಹೇಗೆ?: ಪ್ರಯಾಣಿಕರು ಮೂಡುಬಿದಿರೆಯಿಂದ ಮಂಗಳೂರಿನ ಕಡೆಗೆ ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಕಾರಿನ ಹಿಂಭಾಗದಿಂದ ಅತೀ ವೇಗವಾಗಿ ಬಂದ ಮಿನಿ ಬಸ್ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ನಡೆದಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಇದನ್ನು ಓದಿ : Ration card update : “ಹೊಸ ಪಡಿತರ ಚೀಟಿ ಅರ್ಜಿ ಸಲ್ಲಿಕೆ ಇನ್ನು ಶುರುವಾಗಿಲ್ಲ!” ಇಲಾಖೆ ಪೋರ್ಟಲ್‌ನಲ್ಲಿ ಬದಲಾದ ನಿಯಮಗಳೇನು?

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!