HomeLOCALBrahmavar : ತಂದೆ-ತಾಯಿಯನ್ನು ಸುತ್ತಿಗೆಯಿಂದ ಹೊಡೆದು ಕೊಂದ ಮಗ ಶಾಹಿದ್ ಅಲಿ ಅರೆಸ್ಟ್; ಕೊಲೆ ಮಾಡಿ...

Brahmavar : ತಂದೆ-ತಾಯಿಯನ್ನು ಸುತ್ತಿಗೆಯಿಂದ ಹೊಡೆದು ಕೊಂದ ಮಗ ಶಾಹಿದ್ ಅಲಿ ಅರೆಸ್ಟ್; ಕೊಲೆ ಮಾಡಿ ತಾನೇ 112ಗೆ ಕರೆ ಮಾಡಿದ್ದ ಪಾಪಿ!

ಬ್ರಹ್ಮಾವರ, ಆಗಸ್ಟ್ 24 : ಕೊಲೆಯಾದ ದುರ್ದೈವಿ ದಂಪತಿಯನ್ನು ಮೆಹಮ್ಮೂದ್ ಅಲಿ (55) ಮತ್ತು ಅವರ ಪತ್ನಿ ಶಂಶಾದ್ ಬೇಗಂ (50) ಎಂದು ಗುರುತಿಸಲಾಗಿದೆ. ಅವರ 31 ವರ್ಷದ ಪುತ್ರ ಶಾಹಿದ್ ಅಲಿ ಹೆತ್ತವರನ್ನೇ ಬರ್ಬರವಾಗಿ ಕೊಲೆಗೈದ ಆರೋಪಿಯಾಗಿದ್ದಾನೆ. ಮನೆಯಲ್ಲಿ ಕ್ಷುಲ್ಲಕ ವಿಚಾರಕ್ಕೆ ಉಂಟಾದ ಗಲಾಟೆ ಮತ್ತು ತಂದೆ-ತಾಯಿಯಿಂದ ಆಗುತ್ತಿದ್ದ ಕಿರುಕುಳದಿಂದ (Torture) ಬೇಸತ್ತು ಈ ಭೀಕರ ಕೃತ್ಯವೆಸಗಿರುವುದಾಗಿ ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ.

ಹೆತ್ತವರ ತಲೆಗೆ ಸುತ್ತಿಗೆಯಿಂದ ಮನಬಂದಂತೆ ಹೊಡೆದು ರಕ್ತದ ಮಡುವಿನಲ್ಲಿ ಕೊಂದು ಹಾಕಿದ ಬಳಿಕ, ಆರೋಪಿ ಶಾಹಿದ್ ಅಲಿ ತಾನೇ ಸ್ವತಃ ತುರ್ತು ಸಹಾಯವಾಣಿ ಸಂಖ್ಯೆ 112ಕ್ಕೆ ಕರೆ ಮಾಡಿ ತಾನು ಹೆತ್ತವರನ್ನು ಕೊಂದಿರುವ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದಾನೆ. ಮಾಹಿತಿ ತಿಳಿಯುತ್ತಿದ್ದಂತೆ ಬ್ರಹ್ಮಾವರ ಪೊಲೀಸ್ ಠಾಣೆಯ ಪೊಲೀಸರು ಕ್ಷಿಪ್ರವಾಗಿ ಸ್ಥಳಕ್ಕೆ ಧಾವಿಸಿ ಆರೋಪಿ ಶಾಹಿದ್ ಅಲಿಯನ್ನು ವಶಕ್ಕೆ ಪಡೆದು ಬಂಧಿಸಿದ್ದಾರೆ. ಸ್ಥಳದಲ್ಲಿ ಪರಿಶೀಲನೆ ನಡೆಸಿರುವ ಪೊಲೀಸರು ಕೊಲೆಗೆ ಬಳಸಲಾದ ಸುತ್ತಿಗೆಯನ್ನು ವಶಪಡಿಸಿಕೊಂಡಿದ್ದು, ಆರೋಪಿಯ ವಿಚಾರಣೆ ಹಾಗೂ ಮುಂದಿನ ತನಿಖೆ ಚುರುಕುಗೊಳಿಸಿದ್ದಾರೆ.

ಇದನ್ನು ಓದಿ : Udupi : ಡೇವಿಡ್ ಡಿಸೋಜ ಶೂಟೌಟ್ ಕೇಸ್ ಆರೋಪಿ ಮೇಲೆ ಪೊಲೀಸ್ ಫೈರಿಂಗ್; ಹೆಬ್ರಿಯಲ್ಲಿ ಪರಾರಿಯಾಗಲು ಯತ್ನಿಸಿದ ಅನುಜ್ ಕಾಲಿಗೆ ಗುಂಡೇಟು!

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments