HomeLOCALUdupi : ಡೇವಿಡ್ ಡಿಸೋಜ ಶೂಟೌಟ್ ಕೇಸ್ ಆರೋಪಿ ಮೇಲೆ ಪೊಲೀಸ್ ಫೈರಿಂಗ್; ಹೆಬ್ರಿಯಲ್ಲಿ ಪರಾರಿಯಾಗಲು...

Udupi : ಡೇವಿಡ್ ಡಿಸೋಜ ಶೂಟೌಟ್ ಕೇಸ್ ಆರೋಪಿ ಮೇಲೆ ಪೊಲೀಸ್ ಫೈರಿಂಗ್; ಹೆಬ್ರಿಯಲ್ಲಿ ಪರಾರಿಯಾಗಲು ಯತ್ನಿಸಿದ ಅನುಜ್ ಕಾಲಿಗೆ ಗುಂಡೇಟು!

ಉಡುಪಿ : ಡೇವಿಡ್ ಡಿಸೋಜ ಶೂಟೌಟ್ ಪ್ರಕರಣದಲ್ಲಿ ಪ್ರಮುಖ ಸೂತ್ರಧಾರಿಯಾಗಿದ್ದ ಅನುಜ್, ಸುಪಾರಿ ಹತ್ಯೆ ನಡೆಸಲು ಶೂಟರ್‌ಗಳಾದ ರಾಜು ಮತ್ತು ಆತನ ತಂಡವನ್ನು ಕಳುಹಿಸಿಕೊಟ್ಟಿದ್ದ ಎನ್ನಲಾದ ಗಂಭೀರ ಆರೋಪವನ್ನು ಹೊತ್ತಿದ್ದನು. ಈತನನ್ನು ಕಸ್ಟಡಿಗೆ ಪಡೆದು ತನಿಖೆ ನಡೆಸುತ್ತಿದ್ದ ಪೊಲೀಸರು, ಪೊಲೀಸ್ ಬೆಂಗಾವಲು ವಾಹನದಲ್ಲಿ (Escort Vehicle) ಕರೆದೊಯ್ಯುತ್ತಿದ್ದರು.

ಹೆಬ್ರಿ ಸಮೀಪ ನೈಸರ್ಗಿಕ ಕರೆಗಾಗಿ (Nature’s call) ಪೊಲೀಸ್ ವಾಹನವನ್ನು ನಿಲ್ಲಿಸಿದ ಸಂದರ್ಭದಲ್ಲಿ, ಆರೋಪಿ ಅನುಜ್ ಪೊಲೀಸರ ಕಣ್ತಪ್ಪಿಸಿ ಸಿನಿಮೀಯ ರೀತಿಯಲ್ಲಿ ಪರಾರಿಯಾಗಲು ಯತ್ನಿಸಿದ್ದಾನೆ. ಪೊಲೀಸರು ಆತನಿಗೆ ನಿಲ್ಲುವಂತೆ ಎಚ್ಚರಿಕೆ ನೀಡಿದರೂ ಲೆಕ್ಕಿಸದೆ ಓಡಿಹೋಗಲು ಯತ್ನಿಸಿದಾಗ, ಅನಿವಾರ್ಯವಾಗಿ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ. ಫೈರಿಂಗ್‌ನಲ್ಲಿ ಗಾಯಗೊಂಡ ಆರೋಪಿಯನ್ನು ವಶಕ್ಕೆ ಪಡೆದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಬ್ರಿ ಮತ್ತು ಉಡುಪಿ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

ಇದನ್ನು ಓದಿ : Mangaluru | ಪ್ರತ್ಯೇಕ ಮಾದಕ ವಸ್ತು ಪತ್ತೆ: ಇಬ್ಬರ ಬಂಧನ, ಎಂಡಿಎಂಎ, ಗಾಂಜಾ ವಶ!

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments