Saturday, April 25, 2026
Homeತಾಜಾ ಸುದ್ದಿMadhya Pradesh : ಯುವಕರನ್ನು ಹೊಡೆಯುವುದು ಮತ್ತು ನಿಂದಿಸುವುದು ವಿಡಿಯೋ ವೈರಲ್ ಬೆನ್ನಲ್ಲೇ ಇಬ್ಬರು ಕಾನ್ಸ್‌ಟೇಬಲ್‌ಗಳು...

Madhya Pradesh : ಯುವಕರನ್ನು ಹೊಡೆಯುವುದು ಮತ್ತು ನಿಂದಿಸುವುದು ವಿಡಿಯೋ ವೈರಲ್ ಬೆನ್ನಲ್ಲೇ ಇಬ್ಬರು ಕಾನ್ಸ್‌ಟೇಬಲ್‌ಗಳು ಸಸ್ಪೆಂಡ್!

ಮಧ್ಯಪ್ರದೇಶ/ ಗುಣಾ : ಮಧ್ಯಪ್ರದೇಶದ ಗುಣಾ ಜಿಲ್ಲೆಯ ಕುಂಭರಾಜ್ ಪಟ್ಟಣದಲ್ಲಿ ಯುವಕನ ಮೇಲೆ ಹಲ್ಲೆ ನಡೆಸಿದ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಮೇಲೆ ಇಬ್ಬರು ಪೊಲೀಸ್ ಕಾನ್ಸ್‌ಟೇಬಲ್‌ಗಳನ್ನು ಅಮಾನತುಗೊಳಿಸಲಾಗಿದೆ. ಈ ಘಟನೆಯು ಸೋಮವಾರ ನಡೆದಿದ್ದು, ಮಂಗಳವಾರ ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಪೊಲೀಸ್ ಇಲಾಖೆಯು ಈ ಕ್ರಮ ಕೈಗೊಂಡಿದೆ. ಅಮಾನತುಗೊಂಡವರನ್ನು ಕುಂಭರಾಜ್ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ವಾಸುದೇವ್ ಶರ್ಮ ಮತ್ತು ಪೊಲೀಸ್ ಲೈನ್ಸ್‌ನಿಂದ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಶರದ್ ಯಾದವ್ ಎಂದು ಗುರುತಿಸಲಾಗಿದೆ.


ವೈರಲ್ ಆಗಿರುವ ವಿಡಿಯೋದಲ್ಲಿ ಇಬ್ಬರು ಪೊಲೀಸರು ಯುವಕನ ಮೇಲೆ ದೌರ್ಜನ್ಯ ಎಸಗುತ್ತಿರುವುದು ಸ್ಪಷ್ಟವಾಗಿ ಕಂಡುಬಂದಿದೆ. ಈ ಘಟನೆಯನ್ನು ನೈತಿಕವಲ್ಲದ ಕೃತ್ಯ ಎಂದು ಪರಿಗಣಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಹಿತಿಕಾ ವಾಸಲ್ ಅವರು, ಕರ್ತವ್ಯ ಲೋಪದ ಆರೋಪದ ಮೇಲೆ ಇಬ್ಬರನ್ನೂ ಅಮಾನತುಗೊಳಿಸಿ ಗುಣಾ ಪೊಲೀಸ್ ಲೈನ್ಸ್‌ಗೆ ವರ್ಗಾಯಿಸಿದ್ದಾರೆ. ಅಮಾನತ್ತಿನ ಅವಧಿಯಲ್ಲಿ ಇಬ್ಬರಿಗೂ ಕೇವಲ ಜೀವನೋಪಾಯ ಭತ್ಯೆ ಮಾತ್ರ ನೀಡಲಾಗುವುದು ಮತ್ತು ಅನುಮತಿಯಿಲ್ಲದೆ ಪ್ರಧಾನ ಕಚೇರಿ ಬಿಟ್ಟು ಹೋಗದಂತೆ ಸೂಚಿಸಲಾಗಿದೆ.

ಈ ಇಡೀ ಪ್ರಕರಣದ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿ ಐದು ದಿನಗಳೊಳಗೆ ವರದಿ ಸಲ್ಲಿಸುವಂತೆ ಚಾಂಚೌಡ ಉಪವಿಭಾಗೀಯ ಪೊಲೀಸ್ ಅಧಿಕಾರಿಗೆ ಸೂಚನೆ ನೀಡಲಾಗಿದೆ. ಪೊಲೀಸರ ಈ ಅಶಿಸ್ತಿನ ವರ್ತನೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ತನಿಖೆಯ ವರದಿ ಬಂದ ನಂತರ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!