ಮಂಗಳೂರು : ಬೆಂಜನಪದವು ಕರಾವಳಿ ಸೈಟ್ ಹೌಸ್ ನಿವಾಸಿಗಳಾದ ರಕ್ಷಿತ್ (23) ಮತ್ತು ಅಕ್ಷಯ್ ಬಿ. (23) ಬಂಧಿತ ಆರೋಪಿಗಳಾಗಿದ್ದಾರೆ. ಆಗಸ್ಟ್ 15ರಂದು ಬಜ್ಪೆ ಠಾಣಾ ಪೊಲೀಸರು ಪೊಳಲಿ ದ್ವಾರದ ಬಳಿ ರಸ್ತೆ ಬದಿಯಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದ ವೇಳೆ, ಕೈಕಂಬ ಕಡೆಯಿಂದ ಬಂದ ಸ್ಕೂಟರ್ ಸವಾರರು ಪೊಲೀಸರನ್ನು ಕಂಡು ಎಸ್ಕೇಪ್ ಆಗಲು ಯತ್ನಿಸಿದ್ದಾರೆ. ಅನುಮಾನಗೊಂಡ ಪೊಲೀಸರು ತಕ್ಷಣವೇ ಅವರನ್ನು ಬೆನ್ನಟ್ಟಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಸಲಿ ಕೃತ್ಯ ಬಯಲಾಗಿದೆ.
ಮಾರೀಪಳ್ಳದ ಶಾಕೀರ್ ಎಂಬಾತನಿಂದ ಕಡಿಮೆ ಬೆಲೆಗೆ ಗಾಂಜಾ ಖರೀದಿಸಿದ್ದ ಆರೋಪಿಗಳು, ಅದನ್ನು ಸ್ಕೂಟರ್ನ ಡಿಕ್ಕಿಯಲ್ಲಿ ಬಚ್ಚಿಟ್ಟುಕೊಂಡು ಹೆಚ್ಚು ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಗುರುಪುರದ ಕಡೆಗೆ ಸಾಗಿಸುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ. ಪೊಲೀಸರು ಆರೋಪಿಗಳಿಂದ ಸುಮಾರು 1 ಕೆಜಿ 124 ಗ್ರಾಂ ತೂಕದ ಗಾಂಜಾ, ಬ್ಯಾಟರಿ ಚಾಲಿತ ಡಿಜಿಟಲ್ ತೂಕ ಮಾಪಕ, ಜಿಪ್ ಲಾಕ್ ಕವರ್ಗಳು, 2 ಮೊಬೈಲ್ ಫೋನ್ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಸ್ಕೂಟರ್ ಅನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಆರೋಪಿಗಳ ವಿರುದ್ಧ ಎನ್ಡಿಪಿಎಸ್ (NDPS) ಕಾಯ್ದೆಯಡಿ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜಾಲದ ಮೂಲದ ಬಗ್ಗೆ ತನಿಖೆ ಮುಂದುವರಿದಿದೆ.
ಇದನ್ನು ಓದಿ :Mangaluru : ದೈತ್ಯ ಅಲೆಗಳ ಹೊಡೆತಕ್ಕೆ ಸಿಲುಕಿ ನೀರುಪಾಲಾದ ಯುವ ಮೀನುಗಾರ ; ಕೋಟೆಪುರ ಅಳಿವೆಬಾಗಿಲಿನಲ್ಲಿ ಕೊನೆಗೂ ಸಿಕ್ತು ಶವ!