Home Education SSLC Result 2026 Karnataka today : ಮಧ್ಯಾಹ್ನ 12ಕ್ಕೆ ರಿಸಲ್ಟ್ ಲಭ್ಯ; ನಿಮ್ಮ ಮೊಬೈಲ್‌ನಲ್ಲೇ...

SSLC Result 2026 Karnataka today : ಮಧ್ಯಾಹ್ನ 12ಕ್ಕೆ ರಿಸಲ್ಟ್ ಲಭ್ಯ; ನಿಮ್ಮ ಮೊಬೈಲ್‌ನಲ್ಲೇ ಫಲಿತಾಂಶ ಚೆಕ್ ಮಾಡುವುದು ಹೇಗೆ?

0
67
SSLC Result 2026 Karnataka today: Result available at 12 noon; How to check the result on your mobile?

ಕರ್ನಾಟಕ SSLC ಫಲಿತಾಂಶ 2026 ಏಪ್ರಿಲ್ 23  :  ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ 2026ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶ ಇಂದು (ಗುರುವಾರ, ಏಪ್ರಿಲ್ 23) ಅಧಿಕೃತವಾಗಿ ಹೊರಬೀಳಲಿದೆ. ಮಧ್ಯಾಹ್ನ 12 ಗಂಟೆಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಫಲಿತಾಂಶವನ್ನು ಪ್ರಕಟಿಸಲಿದ್ದು, ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸುದ್ದಿಗೋಷ್ಠಿ ನಡೆಸಿ ಈ ಬಾರಿಯ ಉತ್ತೀರ್ಣ ಪ್ರಮಾಣ, ಜಿಲ್ಲಾವಾರು ಸಾಧನೆ ಮತ್ತು ಟಾಪರ್ಸ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡಲಿದ್ದಾರೆ.


ರಿಸಲ್ಟ್ ಚೆಕ್ ಮಾಡುವ ಸರಳ ವಿಧಾನ
ಮಧ್ಯಾಹ್ನ 12 ಗಂಟೆಯ ನಂತರ ವಿದ್ಯಾರ್ಥಿಗಳು ತಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕ ಅಧಿಕೃತ ವೆಬ್‌ಸೈಟ್‌ಗಳಾದ karresults.nic.in ಅಥವಾ kseab.karnataka.gov.in ಗೆ ಭೇಟಿ ನೀಡಿ ಫಲಿತಾಂಶ ಪಡೆಯಬಹುದು. ವೆಬ್‌ಸೈಟ್‌ನ ಮುಖಪುಟದಲ್ಲಿ ‘SSLC Examination-1 Result 2026’ ಲಿಂಕ್ ಮೇಲೆ ಕ್ಲಿಕ್ ಮಾಡಿ, ನಿಮ್ಮ ನೋಂದಣಿ ಸಂಖ್ಯೆ (Register Number) ಮತ್ತು ಜನ್ಮ ದಿನಾಂಕವನ್ನು (DOB) ನಮೂದಿಸಿ ‘Submit’ ನೀಡಿದರೆ ಅಂಕಪಟ್ಟಿ ಪರದೆಯ ಮೇಲೆ ಕಾಣಿಸುತ್ತದೆ. ಏಕಕಾಲಕ್ಕೆ ಹೆಚ್ಚಿನ ಮಂದಿ ವೆಬ್‌ಸೈಟ್ ಬಳಸುವುದರಿಂದ ಸರ್ವರ್ ನಿಧಾನವಾಗುವ ಸಾಧ್ಯತೆ ಇದ್ದು, ವಿದ್ಯಾರ್ಥಿಗಳು ತಾಳ್ಮೆಯಿಂದ ಇರುವಂತೆ ಸೂಚಿಸಲಾಗಿದೆ.

ಈ ಬಾರಿ ಶಿಕ್ಷಣ ಇಲಾಖೆಯು ಪೋಷಕರ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ಮತ್ತು ವಾಟ್ಸಾಪ್ ಮೂಲಕವೂ ಫಲಿತಾಂಶ ಕಳುಹಿಸುವ ವಿಶೇಷ ವ್ಯವಸ್ಥೆ ಮಾಡಿದೆ. ಅಲ್ಲದೆ, ಅಧಿಕೃತ ಅಂಕಪಟ್ಟಿಯನ್ನು ‘ಡಿಜಿಲಾಕರ್’ (DigiLocker) ಆ್ಯಪ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಅಂಕಗಳು ನಿರೀಕ್ಷಿತ ಮಟ್ಟದಲ್ಲಿ ಬರದಿದ್ದರೂ ವಿದ್ಯಾರ್ಥಿಗಳು ಮತ್ತು ಪೋಷಕರು ಧೃತಿಗೆಡಬೇಕಿಲ್ಲ; ಪರೀಕ್ಷೆ-2 ಮತ್ತು ಪರೀಕ್ಷೆ-3ರ ಮೂಲಕ ಅಂಕಗಳನ್ನು ಸುಧಾರಿಸಿಕೊಳ್ಳಲು ಬೋರ್ಡ್ ಉತ್ತಮ ಅವಕಾಶ ಕಲ್ಪಿಸಿದೆ.

LEAVE A REPLY

Please enter your comment!
Please enter your name here

error: Content is protected !!