Home LOCAL Udupi : ರಜತಾದ್ರಿ ಡಿಸಿ ಕಚೇರಿ ಆವರಣದಲ್ಲಿ ಮಾವಿನಕಾಯಿ ಕೊಯ್ಯುವಾಗ ಹೈಟೆನ್ಷನ್ ವೈರ್ ತಗುಲಿ ಗುಮಾಸ್ತ...

Udupi : ರಜತಾದ್ರಿ ಡಿಸಿ ಕಚೇರಿ ಆವರಣದಲ್ಲಿ ಮಾವಿನಕಾಯಿ ಕೊಯ್ಯುವಾಗ ಹೈಟೆನ್ಷನ್ ವೈರ್ ತಗುಲಿ ಗುಮಾಸ್ತ ಸಾವು!

0
73
Udupi: Clerk dies after being hit by high-tension wire while harvesting mangoes in Rajatadri DC office premises!

ಉಡುಪಿ : ಉಡುಪಿಯ ರಜತಾದ್ರಿ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಮಾವಿನಕಾಯಿ ಕೊಯ್ಯುವ ಸಂದರ್ಭದಲ್ಲಿ ವಿದ್ಯುತ್ ಸ್ಪರ್ಶಿಸಿ ಸರ್ಕಾರಿ ನೌಕರರೊಬ್ಬರು ಸಾವನ್ನಪ್ಪಿರುವ ದಾರುಣ ಘಟನೆ ಶುಕ್ರವಾರ ಬೆಳಿಗ್ಗೆ ಸಂಭವಿಸಿದೆ. ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ ಮಾವಿನಕಾಯಿ ಕೊಯ್ಯುತ್ತಿದ್ದಾಗ ಹೈಟೆನ್ಷನ್ ವಿದ್ಯುತ್ ತಂತಿ ಸ್ಪರ್ಶಿಸಿದ ಪರಿಣಾಮ ಈ ಅವಘಡ ಸಂಭವಿಸಿದೆ.

ಕಚೇರಿಯ ಗುಮಾಸ್ತರಾಗಿದ್ದ ಸದಾನಂದ ಶೇರಿಗಾರ್ (53) ಅವರು ವಿದ್ಯುತ್ ಸ್ಪರ್ಶದಿಂದ ಸ್ಥಳದಲ್ಲೇ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತರು ಉಡುಪಿಯ ಕುಕ್ಕಿಕಟ್ಟೆ ನಿವಾಸಿಯಾಗಿದ್ದು, ತಮ್ಮ ಕುಟುಂಬದ ಪ್ರಮುಖ ಆಧಾರಸ್ತಂಭವಾಗಿದ್ದರು.

ಸದಾನಂದ ಶೇರಿಗಾರ್ ಅವರ ಅಕಾಲಿಕ ನಿಧನದಿಂದ ಕುಟುಂಬಸ್ಥರು ಮತ್ತು ಬಂಧುಬಳಗದಲ್ಲಿ ದುಃಖ ಮಡುಗಟ್ಟಿದೆ. ಈ ಘಟನೆಗೆ ಸಂಬಂಧಿಸಿದಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ

LEAVE A REPLY

Please enter your comment!
Please enter your name here

error: Content is protected !!