HomeLOCALUdupi : ಬಾವಿಗೆ ಬಿದ್ದ ಹೆಂಡತಿಯನ್ನು ಕಾಪಾಡಲು ಆಳಕ್ಕೆ ಹಾರಿದ ಗಂಡ; ದಂಪತಿಯನ್ನು ಸಶರೀರ ರಕ್ಷಿಸಿದ...

Udupi : ಬಾವಿಗೆ ಬಿದ್ದ ಹೆಂಡತಿಯನ್ನು ಕಾಪಾಡಲು ಆಳಕ್ಕೆ ಹಾರಿದ ಗಂಡ; ದಂಪತಿಯನ್ನು ಸಶರೀರ ರಕ್ಷಿಸಿದ ಈಶ್ವರ್ ಮಲ್ಪೆ ಟೀಮ್!

ಉಡುಪಿ : ಕೆಮ್ಮಣ್ಣು ಸರ್ಕಾರಿ ಪದವಿಪೂರ್ವ ಕಾಲೇಜಿನ ಸಮೀಪದ ನಿವಾಸಿಗಳಾದ ಗೋಪಾಲಕೃಷ್ಣ (65) ಮತ್ತು ಶ್ಯಾಮಲಾ (60) ದಂಪತಿ ಮಂಗಳವಾರ ಮುಂಜಾನೆ ಈ ಭೀಕರ ಅಪಘಾತದಿಂದ ಕೂದಲೆಳೆ ಅಂತರದಲ್ಲಿ ಪಾರಾದ ದಂಪತಿಯಾಗಿದ್ದಾರೆ. ಮುಂಜಾನೆ ಮನೆಯ ಸಮೀಪದಲ್ಲೇ ಇದ್ದ ಶ್ಯಾಮಲಾ ಅವರು ಆಕಸ್ಮಿಕವಾಗಿ ನಿಯಂತ್ರಣ ತಪ್ಪಿ ಆಳವಾದ ಬಾವಿಯೊಳಗೆ ಬಿದ್ದಿದ್ದಾರೆ. ಇದನ್ನು ತಕ್ಷಣವೇ ಗಮನಿಸಿದ ಪತಿ ಗೋಪಾಲಕೃಷ್ಣ ಅವರು, ಹೆಂಡತಿಯನ್ನು ಹೇಗಾದರೂ ಮಾಡಿ ಬದುಕಿಸಲೇಬೇಕೆಂಬ ತರಾತುರಿಯಲ್ಲಿ ಯಾವುದೇ ಮುಂಜಾಗ್ರತೆ ಇಲ್ಲದೆ ನೇರವಾಗಿ ಬಾವಿಯೊಳಗೆ ಧುಮುಕಿದ್ದಾರೆ.

ವೃದ್ಧ ದಂಪತಿಗಳಿಬ್ಬರೂ ಬಾವಿಯೊಳಗೆ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಈ ಘಟನೆಯ ಬಗ್ಗೆ ಸ್ಥಳೀಯರು ತಕ್ಷಣವೇ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಗೆ ಹಾಗೂ ಕರಾವಳಿಯ ಪ್ರಖ್ಯಾತ ಆಪತ್ಬಾಂಧವ ಈಶ್ವರ್ ಮಲ್ಪೆ ಅವರಿಗೆ ಮಾಹಿತಿ ನೀಡಿದ್ದಾರೆ. ಸಮಾಚಾರ ತಿಳಿಯುತ್ತಿದ್ದಂತೆಯೇ ಕಿಂಚಿತ್ತೂ ತಡಮಾಡದೆ ಸ್ಥಳಕ್ಕೆ ಧಾವಿಸಿದ ಈಶ್ವರ್ ಮಲ್ಪೆ ಮತ್ತು ಅಗ್ನಿಶಾಮಕ ಸಿಬ್ಬಂದಿ ಅತ್ಯಂತ ಚುರುಕಾಗಿ ಜಂಟಿ ಕಾರ್ಯಾಚರಣೆ ಆರಂಭಿಸಿದ್ದಾರೆ.

ಅತ್ಯಂತ ಕಿರಿದಾದ ಮತ್ತು ಆಳವಾದ ಬಾವಿಯೊಳಗೆ ಹಗ್ಗಗಳನ್ನು ಇಳಿಸಿದ ರಕ್ಷಣಾ ತಂಡವು, ದಂಪತಿಗಳಿಬ್ಬರಿಗೂ ಧೈರ್ಯ ತುಂಬಿ ಸುರಕ್ಷಿತವಾಗಿ ಒಬ್ಬೊಬ್ಬರನ್ನೇ ಮೇಲಕ್ಕೆ ಎತ್ತಿ ತರುವಲ್ಲಿ ಯಶಸ್ವಿಯಾಗಿದೆ. ನಡುಬೆಳಗ್ಗೆ ಇಡೀ ಕೆಮ್ಮಣ್ಣು ಗ್ರಾಮಸ್ಥರನ್ನು ನಡುಗಿಸಿದ್ದ ಈ ಹೈಡ್ರಾಮಾ ಕಡೆಗೂ ಯಾವುದೇ ಪ್ರಾಣಾಪಾಯವಿಲ್ಲದೆ ಸುಖಾಂತ್ಯ ಕಂಡಿದ್ದು, ದಂಪತಿಯನ್ನು ಸಶರೀರವಾಗಿ ಹೊರತಂದ ರಕ್ಷಣಾ ತಂಡ ಹಾಗೂ ಈಶ್ವರ್ ಮಲ್ಪೆ ಅವರ ಸಾಹಸಕ್ಕೆ ಸಾರ್ವಜನಿಕರು ವ್ಯಾಪಕ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Read This : Madhya Pradesh : ಸಿಧಿಯಲ್ಲಿ 53 ತಾಯಂದಿರ ಭೀಕರ ಸಾವು; ಸ್ವಯಂ ಪ್ರೇರಿತ ಕೇಸ್ ದಾಖಲಿಸಿದ NHRC!

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments