Homeತಾಜಾ ಸುದ್ದಿBelthangady : ಮದ್ದಡ್ಕ ಸಮೀಪ ಕಾರು-ಸ್ಕೂಟರ್ ಭೀಕರ ಢಿಕ್ಕಿ; ಚರಂಡಿಗೆ ಬಿದ್ದ ವಾಹನಗಳು, ಸವಾರರಿಗೆ ಗಾಯ!

Belthangady : ಮದ್ದಡ್ಕ ಸಮೀಪ ಕಾರು-ಸ್ಕೂಟರ್ ಭೀಕರ ಢಿಕ್ಕಿ; ಚರಂಡಿಗೆ ಬಿದ್ದ ವಾಹನಗಳು, ಸವಾರರಿಗೆ ಗಾಯ!

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ಮದ್ದಡ್ಕ-ವರಕದೆ ಸಮೀಪ ಗುರುವಾರ ಈ ಭೀಕರ ರಸ್ತೆ ಅಪಘಾತ ನಡೆದಿದೆ. ಬೆಳ್ತಂಗಡಿಯಿಂದ ಮಡಂತ್ಯಾರು ಕಡೆಗೆ ತೆರಳುತ್ತಿದ್ದ ಸ್ಕೂಟರ್ ಹಾಗೂ ಎದುರಿನಿಂದ ಬೆಳ್ತಂಗಡಿ ಕಡೆಗೆ ಬರುತ್ತಿದ್ದ ಕಾರು ಪರಸ್ಪರ ಮುಖಾಮುಖಿ ಢಿಕ್ಕಿ ಹೊಡೆದಿಕೊಂಡಿವೆ. ಢಿಕ್ಕಿಯ ರಭಸ ಎಷ್ಟಿತ್ತೆಂದರೆ ಕಾರು ಮತ್ತು ಸ್ಕೂಟರ್ ಎರಡೂ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಬಿದ್ದಿವೆ. ಈ ಅಪಘಾತದಿಂದಾಗಿ ಎರಡೂ ವಾಹನಗಳಿಗೆ ಭಾರೀ ಹಾನಿಯಾಗಿದೆ.

ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳದಲ್ಲಿ ಸಾರ್ವಜನಿಕರು ಜಮಾಯಿಸಿದ್ದು, ಸ್ಕೂಟರ್ ಸವಾರರು ಗಾಯಗೊಂಡಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯರು ಗಾಯಗೊಂಡ ಸವಾರರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments