Home ತಾಜಾ ಸುದ್ದಿ Khameni ಹತ್ಯೆ ವಿರೋಧ: ಕಾಶ್ಮೀರ, ಕ್ವಿಟೊ, ಸಿಯೋಲ್ ಸೇರಿ ಜಗತ್ತಿನ ಹಲವೆಡೆ ಭಾರಿ ಪ್ರತಿಭಟನೆ

    Khameni ಹತ್ಯೆ ವಿರೋಧ: ಕಾಶ್ಮೀರ, ಕ್ವಿಟೊ, ಸಿಯೋಲ್ ಸೇರಿ ಜಗತ್ತಿನ ಹಲವೆಡೆ ಭಾರಿ ಪ್ರತಿಭಟನೆ

    0
    55
    ಖಮೇನಿ ಹತ್ಯೆ ವಿರೋಧಿಸಿ ಕಾಶ್ಮೀರ, ಕ್ವಿಟೊ, ಸಿಯೋಲ್‌ನಲ್ಲಿ ಜಾಗತಿಕ ಪ್ರತಿಭಟನೆ

    ಖಮೇನಿ ಹತ್ಯೆ ವಿರೋಧ: ಕಾಶ್ಮೀರ ಬೀದಿಗಿಳಿದ ಸಾವಿರಾರು ಮಂದಿ, ಕ್ವಿಟೊದಲ್ಲಿ ಇರಾನ್ ಕೇಂದ್ರ ಧ್ವಂಸ

    ಅಮೆರಿಕ ಮತ್ತು ಇಸ್ರೇಲ್ ಜಂಟಿ ಕಾರ್ಯಾಚರಣೆಯಲ್ಲಿ ಇರಾನ್ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಹತ್ಯೆ ಮಾಡಿದ ಸುದ್ದಿ ಜಗತ್ತಿನ ಮೂಲೆ ಮೂಲೆಗೆ ಹಬ್ಬಿದ ಬೆನ್ನಲ್ಲೇ, ವಿವಿಧ ದೇಶಗಳಲ್ಲಿ ತೀವ್ರ ಪ್ರತಿಭಟನೆಗಳು ಭುಗಿಲೆದ್ದಿವೆ. ಭಾರತದ ಕಾಶ್ಮೀರ, ದಕ್ಷಿಣ ಅಮೆರಿಕದ ಈಕ್ವೆಡಾರ್ ರಾಜಧಾನಿ ಕ್ವಿಟೊ ಮತ್ತು ದಕ್ಷಿಣ ಕೊರಿಯಾದ ಸಿಯೋಲ್ ಸೇರಿ ಹಲವು ದೇಶಗಳಲ್ಲಿ ಪ್ರತಿಭಟನೆ ಏಕಕಾಲಕ್ಕೆ ಹತ್ತಿಕೊಂಡಿದೆ.

    ಕಾಶ್ಮೀರದಲ್ಲಿ ಶಿಯಾ ಮುಸ್ಲಿಂ ಜನಸಂಖ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ನೂರಾರು ಪ್ರತಿಭಟನಾಕಾರರು ಬೀದಿಗಿಳಿದಿದ್ದಾರೆ. ಖಮೇನಿ ಚಿತ್ರಗಳನ್ನು ಹಿಡಿದು ಘೋಷಣೆ ಕೂಗುತ್ತಾ ಮಾರ್ಚ್ ನಡೆಸಿದ ಪ್ರತಿಭಟನಾಕಾರರು ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದಾರೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ದಕ್ಷಿಣ ಅಮೆರಿಕದ ಪುಟ್ಟ ದೇಶ ಈಕ್ವೆಡಾರ್‌ನ ರಾಜಧಾನಿ ಕ್ವಿಟೊದಲ್ಲಿ ಸ್ಥಳೀಯ ನಿವಾಸಿಗಳ ಗುಂಪು ಇರಾನ್ ಸಾಂಸ್ಕೃತಿಕ ಕೇಂದ್ರದ ಮೇಲೆ ಹಲ್ಲೆ ನಡೆಸಿ ಕಿಟಕಿಗಳನ್ನು ಒಡೆದಿದ್ದಾರೆ. ಕೋಲು ಮತ್ತು ಕಲ್ಲು ಹಿಡಿದ ಜನರ ಗುಂಪು ಕಟ್ಟಡ ಪ್ರವೇಶಿಸಿ ಹಾನಿ ಮಾಡಿದ್ದು ಒಬ್ಬ ವ್ಯಕ್ತಿ ಗಾಯಗೊಂಡು ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಸ್ಥಿತಿ ಗಂಭೀರವಾಗಿಲ್ಲ ಎಂದು ಪೊಲೀಸ್ ತಿಳಿಸಿದೆ.

    ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್‌ನಲ್ಲಿ ಇರಾನ್ ಮೇಲಿನ ಅಮೆರಿಕ-ಇಸ್ರೇಲ್ ದಾಳಿ ಖಂಡಿಸಿ ಸ್ಥಳೀಯ ನಾಗರಿಕರು ಅಮೆರಿಕ ರಾಯಭಾರ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. ಈ ಪ್ರತಿಭಟನೆ ಶಾಂತಿಯುತವಾಗಿತ್ತು ಎಂದು ದಕ್ಷಿಣ ಕೊರಿಯಾ ಅಧಿಕಾರಿಗಳು ಹೇಳಿದ್ದಾರೆ. ಇದರ ಜೊತೆ ಇರಾಕ್, ಪಾಕಿಸ್ತಾನ, ಲೆಬನಾನ್ ಮತ್ತು ಇತರ ದೇಶಗಳಲ್ಲಿ ಪ್ರತಿಭಟನೆ ನಡೆದಿರುವ ವರದಿಗಳಿವೆ.

    LEAVE A REPLY

    Please enter your comment!
    Please enter your name here

    error: Content is protected !!