Home Sports Anushka Sharma : 66ನೇ ಅರ್ಧಶತಕ ತಪ್ಪಿಸಿಕೊಂಡ ಕೊಹ್ಲಿ; ಅನುಷ್ಕಾ ಶರ್ಮಾ ರಿಯಾಕ್ಷನ್ ಹೇಗಿತ್ತು ಗೊತ್ತಾ?

Anushka Sharma : 66ನೇ ಅರ್ಧಶತಕ ತಪ್ಪಿಸಿಕೊಂಡ ಕೊಹ್ಲಿ; ಅನುಷ್ಕಾ ಶರ್ಮಾ ರಿಯಾಕ್ಷನ್ ಹೇಗಿತ್ತು ಗೊತ್ತಾ?

0
34
Anushka Sharma: Kohli missed his 66th half-century; Do you know what Anushka Sharma's reaction was?

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟರ್, ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ ಮತ್ತೊಮ್ಮೆ ತಮ್ಮ ಭರ್ಜರಿ ಬ್ಯಾಟಿಂಗ್ ಮೂಲಕ ಗರ್ಜಿಸಿದ್ದಾರೆ. ಬುಧವಾರ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಕೊಹ್ಲಿ ಅಮೋಘ ಇನಿಂಗ್ಸ್ ಆಡುವ ಮೂಲಕ ಆರ್‌ಸಿಬಿ ತಂಡದ ಸುಲಭ ಗೆಲುವಿಗೆ ಪ್ರಮುಖ ಕೊಡುಗೆ ನೀಡಿದರು. ಆದರೆ, ಕೇವಲ ಒಂದು ರನ್ ಅಂತರದಲ್ಲಿ ತಮ್ಮ 66ನೇ ಅರ್ಧಶತಕವನ್ನು ತಪ್ಪಿಸಿಕೊಂಡಿದ್ದು ಅಭಿಮಾನಿಗಳಲ್ಲಿ ಅಸಮಾಧಾನ
ಮೂಡಿಸಿದೆ.


ಕೊಹ್ಲಿ ಕೇವಲ 34 ಎಸೆತಗಳಲ್ಲಿ ಆರು ಬೌಂಡರಿ ಹಾಗೂ ಒಂದು ಭರ್ಜರಿ ಸಿಕ್ಸರ್ ನೆರವಿನಿಂದ 49 ರನ್ ಸಿಡಿಸಿ ಔಟಾದರು. ಲಕ್ನೋ ಬೌಲರ್ ಆವೇಶ್ ಖಾನ್ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಕೈಹಾಕಿದ ಕೊಹ್ಲಿ, ಲಾಂಗ್-ಆನ್‌ನಲ್ಲಿ ನಿಕೋಲಸ್ ಪೂರನ್ ಅವರಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಪಂದ್ಯವನ್ನು ಸ್ಟೇಡಿಯಂನಲ್ಲಿ ವೀಕ್ಷಿಸುತ್ತಿದ್ದ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ, ಪತಿಯ ನಿರ್ಗಮನಕ್ಕೆ ತೀವ್ರ ಹತಾಶ ಪ್ರತಿಕ್ರಿಯೆ ವ್ಯಕ್ತಪಡಿಸಿದರು.

ಆರ್‌ಸಿಬಿ ಬೌಲರ್‌ಗಳ ಭರ್ಜರಿ ದಾಳಿಯಿಂದಾಗಿ ಕಡಿಮೆ ಸ್ಕೋರ್‌ನ ಈ ಪಂದ್ಯದಲ್ಲಿ ರಶೀಖ್ ಸಲಾಮ್ ಧರ್ 24 ರನ್‌ಗೆ ನಾಲ್ಕು ವಿಕೆಟ್ ಕಿತ್ತು ಮೇಲುಗೈಗೆ ಕಾರಣರಾದರು. ಬಳಿಕ ಭುವನೇಶ್ವರ್ ಕುಮಾರ್ (3/27) ಹಾಗೂ ಕೃನಾಲ್ ಪಾಂಡ್ಯ (2/38) ಎದುರಾಳಿಗಳನ್ನು ಕಟ್ಟಿಹಾಕಿದರು. ಇದಕ್ಕೆ ಉತ್ತರವಾಗಿ ವಿರಾಟ್ ಕೊಹ್ಲಿ (49), ನಾಯಕ ರಜತ್ ಪಾಟಿದಾರ್ (27) ಮತ್ತು ಜಿತೇಶ್ ಶರ್ಮಾ (23) ಅವರ ಸಂಘಟಿತ ಕೊಡುಗೆಯಿಂದ ಆರ್‌ಸಿಬಿ ತಂಡವು 15.1 ಓವರ್‌ಗಳಲ್ಲೇ ಗೆಲುವಿನ ಗುರಿ ತಲುಪಿ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.

LEAVE A REPLY

Please enter your comment!
Please enter your name here

error: Content is protected !!