Saturday, April 25, 2026
Homeತಾಜಾ ಸುದ್ದಿValparai : ವಾಲ್ಪಾರೈ ಭೀಕರ ಅಪಘಾತಕ್ಕೆ 'ಬ್ರೇಕ್ ಫೇಲ್' ಕಾರಣ?: 27 ತಿರುವುಗಳ ಬಳಿಕ ಬಿಸಿಯಾದ...

Valparai : ವಾಲ್ಪಾರೈ ಭೀಕರ ಅಪಘಾತಕ್ಕೆ ‘ಬ್ರೇಕ್ ಫೇಲ್’ ಕಾರಣ?: 27 ತಿರುವುಗಳ ಬಳಿಕ ಬಿಸಿಯಾದ ಬ್ರೇಕ್ ಸಿಸ್ಟಮ್!; ಘಾಟಿ ರಸ್ತೆಯಲ್ಲಿ ಚಾಲಕರು ಮಾಡಬಾರದ ತಪ್ಪುಗಳಿವು!

ವಾಲ್ಪಾರೈ  : ಒಂಬತ್ತು ಜನರ ಬಲಿ ಪಡೆದ ಆಳಿಯಾರ್ ಘಾಟ್ ರಸ್ತೆಯ ವ್ಯಾನ್ ಅಪಘಾತಕ್ಕೆ ಬ್ರೇಕ್ ವೈಫಲ್ಯವೇ ಪ್ರಮುಖ ಕಾರಣ ಎಂದು ತಮಿಳುನಾಡು ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ಅಂದಾಜಿಸಿದ್ದಾರೆ. ಘಾಟಿಯ ಒಟ್ಟು 27 ತಿರುವುಗಳನ್ನು ಸತತವಾಗಿ ಇಳಿದ ನಂತರ ಬ್ರೇಕ್ ವ್ಯವಸ್ಥೆಯು ಅತಿಯಾಗಿ ಬಿಸಿಯಾಗಿ (Overheating) ಕಾರ್ಯನಿರ್ವಹಿಸದೆ ಇರಬಹುದು ಎಂದು ಶಂಕಿಸಲಾಗಿದೆ. ಚಾಲಕನು ಗೇರ್ ಬದಲಾಯಿಸಿ ವಾಹನವನ್ನು ನಿಲ್ಲಿಸಲು ಪ್ರಯತ್ನಿಸಿದರೂ ಅದು ವಿಫಲವಾಗಿ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.


800 ಅಡಿ ಆಳಕ್ಕೆ ಬಿದ್ದ ವ್ಯಾನ್
ಈ ಭೀಕರ ಅಪಘಾತವು ಘಾಟಿಯ 13ನೇ ತಿರುವಿನಲ್ಲಿ ಸಂಭವಿಸಿದೆ. ಅಲ್ಲಿ ಭದ್ರತೆಗಾಗಿ ಕೇವಲ ಸಣ್ಣ ಕಲ್ಲಿನ ಗೋಡೆಯಷ್ಟೇ ಇದ್ದು, ಬಲಿಷ್ಠವಾದ ರಕ್ಷಣಾ ಗೋಡೆ (Protection wall) ಇರಲಿಲ್ಲ. ನಿಯಂತ್ರಣ ತಪ್ಪಿದ ವ್ಯಾನ್ ಕಬ್ಬಿಣದ ಕಂಬಗಳನ್ನು ಮುರಿದು ಸುಮಾರು 800 ಅಡಿ ಆಳದ ಪ್ರಪಾತಕ್ಕೆ ಬಿದ್ದಿದೆ. ಬಂಡೆಗಳ ನಡುವೆ ವಾಹನವು ಐದು ಬಾರಿ ಪಲ್ಟಿಯಾಗಿದ್ದು, ನಜ್ಜುಗುಜ್ಜಾದ ವಾಹನದ ಅವಶೇಷಗಳು ಕೆಳಗಿನ 10ನೇ ಮತ್ತು 9ನೇ ತಿರುವಿನ ರಸ್ತೆಯ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.

ಬ್ರೇಕ್ ಫೇಡ್ (Brake Fade) ಸಮಸ್ಯೆ ಬೊಲೆರೊ ಅಥವಾ ಟ್ರಾವೆಲರ್‌ನಂತಹ ಭಾರೀ ವಾಹನಗಳು ಘಾಟ್ ರಸ್ತೆಯಲ್ಲಿ ಇಳಿಯುವಾಗ ‘ಬ್ರೇಕ್ ಫೇಡ್’ ಎಂಬ ಸಮಸ್ಯೆ ಎದುರಾಗುತ್ತದೆ. ಚಾಲಕರು ಸತತವಾಗಿ ಬ್ರೇಕ್ ಪೆಡಲ್ ಒತ್ತುತ್ತಿದ್ದರೆ ಬ್ರೇಕ್ ಲೈನರ್ ಅತಿಯಾಗಿ ಬಿಸಿಯಾಗಿ ಘರ್ಷಣೆ ಕಡಿಮೆಯಾಗುತ್ತದೆ, ಇದರಿಂದ ಬ್ರೇಕ್ ಹಿಡಿಯುವುದು ನಿಲ್ಲುತ್ತದೆ. ಬ್ರೇಕ್ ಹಾಕಿದಾಗ ಮೆದು ಎನಿಸುವುದು ಅಥವಾ ಸುಟ್ಟ ವಾಸನೆ ಬರುವುದು ಇದರ ಪ್ರಮುಖ ಲಕ್ಷಣಗಳಾಗಿವೆ.

ಸುರಕ್ಷಿತ ಚಾಲನೆಗಾಗಿ ಸಲಹೆಗಳು ಘಾಟಿ ಇಳಿಯುವಾಗ ಫುಟ್ ಬ್ರೇಕ್ ಬದಲಿಗೆ ‘ಇಂಜಿನ್ ಬ್ರೇಕಿಂಗ್’ (Engine Braking) ಮೇಲೆ ಅವಲಂಬಿತವಾಗುವುದು ಸುರಕ್ಷಿತ. ವಾಹನವನ್ನು ಸದಾ ಲೋ ಗೇರ್ (1ನೇ ಅಥವಾ 2ನೇ ಗೇರ್) ನಲ್ಲಿಟ್ಟು ಚಲಿಸಬೇಕು. ಬ್ರೇಕ್ ಅನ್ನು ಸತತವಾಗಿ ಒತ್ತುವ ಬದಲಿಗೆ ಬಿಟ್ಟು ಬಿಟ್ಟು ಬಳಸಬೇಕು. ಯಾವುದೇ ಕಾರಣಕ್ಕೂ ನ್ಯೂಟ್ರಲ್ ಗೇರ್ ಬಳಸಬಾರದು ಮತ್ತು ವಾಹನದ ಮಿತಿಮೀರಿದ ಭಾರ (Overload) ತಪ್ಪಿಸುವುದು ಅತ್ಯಗತ್ಯ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!