Monday, May 11, 2026
Homeತಾಜಾ ಸುದ್ದಿMumbai : ಮುಂಬೈ ಕರಾಟೆ ಅಖಾಡದಲ್ಲಿ ಕೋಲ್ಪೆಯ ಪುಟ್ಟ ಬಾಲಕನ ಪರಾಕ್ರಮ! ನ್ಯಾಷನಲ್ ಚಾಂಪಿಯನ್ ಆಗಿ...

Mumbai : ಮುಂಬೈ ಕರಾಟೆ ಅಖಾಡದಲ್ಲಿ ಕೋಲ್ಪೆಯ ಪುಟ್ಟ ಬಾಲಕನ ಪರಾಕ್ರಮ! ನ್ಯಾಷನಲ್ ಚಾಂಪಿಯನ್ ಆಗಿ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ 3ನೇ ತರಗತಿ ವಿದ್ಯಾರ್ಥಿ

ಮುಂಬೈ : ಮುಂಬೈನಲ್ಲಿ ನಡೆದ UGKFI 3rd National Level ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಕೋಲ್ಪೆಯ ಬಾಲಕ ಅದ್ಭುತ ಪ್ರದರ್ಶನ ನೀಡಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾನೆ. ಈ ಅಮೋಘ ಸಾಧನೆಯ ಮೂಲಕ ಆತ ಇದೀಗ ಅಂತರಾಷ್ಟ್ರೀಯ ಮಟ್ಟದ ಟೂರ್ನಮೆಂಟ್‌ಗೆ (International Tournament) ಅಧಿಕೃತವಾಗಿ ಆಯ್ಕೆಯಾಗಿದ್ದಾನೆ.

ಈ ಸಾಧನೆ ಮಾಡಿದ ಬಾಲಕ ಕೋಲ್ಪೆ ಮದ್ರಸದ 3ನೇ ತರಗತಿಯ ವಿದ್ಯಾರ್ಥಿಯಾಗಿದ್ದಾನೆ. ಈತ ಖಲಂದರ್ ಶಾ ದಫ್ ಸಮಿತಿ ಕೋಲ್ಪೆ ಇದರ ಪ್ರಧಾನ ಕಾರ್ಯದರ್ಶಿಯಾದ ಬಹು ಇಸ್ಮಾಯಿಲ್ ಹಾಜಿ ಕೋಲ್ಪೆ ಅವರ ಸುಪುತ್ರ. ಮಗನ ಈ ಅಪ್ರತಿಮ ಸಾಧನೆಯಿಂದಾಗಿ ಕುಟುಂಬದಲ್ಲಿ ಮತ್ತು ಇಡೀ ಕೋಲ್ಪೆ ಗ್ರಾಮದಲ್ಲಿ ಸಂಭ್ರಮ ಮನೆಮಾಡಿದೆ.

ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಚಾಂಪಿಯನ್ ಆಗಿ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಈ ಪುಟ್ಟ ಬಾಲಕ ಕೋಲ್ಪೆ ಗ್ರಾಮಕ್ಕೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ದೊಡ್ಡ ಅಭಿಮಾನವನ್ನು ತಂದಿದ್ದಾನೆ. ಗ್ರಾಮಸ್ಥರು ಹಾಗೂ ವಿವಿಧ ಸಂಘ ಸಂಸ್ಥೆಗಳು ಬಾಲಕನ ಸಾಧನೆಯನ್ನು ಶ್ಲಾಘಿಸಿ, ಮುಂದಿನ ಅಂತರಾಷ್ಟ್ರೀಯ ಸ್ಪರ್ಧೆಗೂ ಶುಭ ಹಾರೈಸಿದ್ದಾರೆ.

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!