HomeLOCALKarkala : ಉಡುಪಿ ಜಿಲ್ಲೆಯಿಂದ ರೌಡಿಶೀಟರ್, ಅಪರಾಧಿ ಸೋಮನಾಥ್ ಗಡಿಪಾರು

Karkala : ಉಡುಪಿ ಜಿಲ್ಲೆಯಿಂದ ರೌಡಿಶೀಟರ್, ಅಪರಾಧಿ ಸೋಮನಾಥ್ ಗಡಿಪಾರು

ಕಾರ್ಕಳ, ಏಪ್ರಿಲ್ 30 : ಕಾರ್ಕಳ ತಾಲೂಕಿನ ಕಸಬ ಗ್ರಾಮದ ಟೆಳ್ಳಾರು ರಸ್ತೆಯ ಕುಂಬ್ರಪದವು ನಿವಾಸಿ ಸೋಮನಾಥ್ ಅಲಿಯಾಸ್ ಸೋಮು (40) ಗಡೀಪಾರಾದ ರೌಡಿಶೀಟರ್. ಈತ ಕಾರ್ಕಳ ನಗರ ಪೊಲೀಸ್ ಠಾಣೆಯ ರೌಡಿಶೀಟರ್ ಪಟ್ಟಿಯಲ್ಲಿರುವ ಅಪರಾಧಿಯಾಗಿದ್ದು, ಕಳೆದ ಹಲವು ದಿನಗಳಿಂದ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದನು. ಈತನ ವಿರುದ್ಧ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಒಟ್ಟು 11 ಪ್ರಕರಣಗಳು ದಾಖಲಾಗಿವೆ.

ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ, ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಹಾಗೂ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಏಪ್ರಿಲ್ 30, 2026 ರಂದು ಈ ಗಡೀಪಾರು ಆದೇಶವನ್ನು ಹೊರಡಿಸಿದ್ದಾರೆ. ಈ ಆದೇಶದನ್ವಯ, ಸೋಮನಾಥ್ ಇನ್ನು ಮುಂದೆ ಉಡುಪಿ ಜಿಲ್ಲೆಗೆ ಪ್ರವೇಶಿಸುವಂತಿಲ್ಲ. ಈತನನ್ನು ಶಿವಮೊಗ್ಗ ಜಿಲ್ಲೆಯ ತುಂಗಾ ನಗರ ಪೊಲೀಸ್ ಠಾಣಾ ವ್ಯಾಪ್ತಿಗೆ ಗಡೀಪಾರು ಮಾಡಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments