Home ತಾಜಾ ಸುದ್ದಿ Kolar | SSLC ರಿಸಲ್ಟ್ ಬಂದ ದಿನವೇ ಜಲಸಮಾಧಿಯಾದ ವಿದ್ಯಾರ್ಥಿ!: ಪರೀಕ್ಷೆ ಪಾಸಾದ ಖುಷಿಯಲ್ಲಿ ಈಜಲು...

    Kolar | SSLC ರಿಸಲ್ಟ್ ಬಂದ ದಿನವೇ ಜಲಸಮಾಧಿಯಾದ ವಿದ್ಯಾರ್ಥಿ!: ಪರೀಕ್ಷೆ ಪಾಸಾದ ಖುಷಿಯಲ್ಲಿ ಈಜಲು ಹೋಗಿದ್ದ ಕಿರಣ್ ನೀರುಪಾಲು

    0
    44
    Kolar | Student drowns on the day SSLC results came out!: Kiran Neerupalu, who went swimming in joy after passing the exam, drowns

    ಕೋಲಾರ, ಏಪ್ರಿಲ್​​ 23 : ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾದ ದಿನವೇ ವಿದ್ಯಾರ್ಥಿಯೋರ್ವ ಈಜಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ. ರಘುಪತಿ ಎಂಬವರ ಪುತ್ರ ಕಿರಣ್ (15) ಮೃತಪಟ್ಟ ಬಾಲಕ. ಇಂದು ಪ್ರಕಟವಾದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 239 ಅಂಕಗಳನ್ನು ಪಡೆದು ತೇರ್ಗಡೆಯಾಗಿದ್ದ ಕಿರಣ್, ತಾನು ಪರೀಕ್ಷೆ ಪಾಸಾದ ಖುಷಿಯಲ್ಲಿದ್ದನು.

     

    ಫಲಿತಾಂಶ ಬಂದ ನಂತರ ಕಿರಣ್ ತನ್ನ ಸ್ನೇಹಿತರ ಜೊತೆಗೂಡಿ ಈಜಲು ತೆರಳಿದ್ದನು. ಈ ವೇಳೆ ಬಾವಿಯಲ್ಲಿ ಈಜಲು ಇಳಿದಾಗ, ಸರಿಯಾಗಿ ಈಜು ಬಾರದ ಕಾರಣ ನೀರಿನಲ್ಲಿ ಮುಳುಗಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಇತ್ತೀಚೆಗಷ್ಟೇ ತಲಕಾಡು ಬಳಿ ವಿದ್ಯಾರ್ಥಿನಿಯರು ನೀರುಪಾಲಾದ ಘಟನೆ ಮಾಸುವ ಮುನ್ನವೇ ಕೋಲಾರದಲ್ಲಿ ಈ ದುರಂತ ನಡೆದಿದೆ.

    ಘಟನೆಯ ನಂತರ ಕಿರಣ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಬಾಲಕನ ಶವಕ್ಕಾಗಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬಾವಿಯಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಈ ಘಟನೆಯು ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

    LEAVE A REPLY

    Please enter your comment!
    Please enter your name here

    error: Content is protected !!