Home ತಾಜಾ ಸುದ್ದಿ Strait of Hormuz : ಅಮೆರಿಕದ ದಿಗ್ಬಂಧನದ ನಡುವೆಯೂ ಹಾರ್ಮುಜ್ ಜಲಸಂಧಿಯಲ್ಲಿ ಅನುಮತಿ ಪಡೆದ ಟ್ಯಾಂಕರ್‌ಗಳು...

    Strait of Hormuz : ಅಮೆರಿಕದ ದಿಗ್ಬಂಧನದ ನಡುವೆಯೂ ಹಾರ್ಮುಜ್ ಜಲಸಂಧಿಯಲ್ಲಿ ಅನುಮತಿ ಪಡೆದ ಟ್ಯಾಂಕರ್‌ಗಳು ಸಾಗುತ್ತಿವೆ

    0
    59

    ಹೊರ್ಮಜ್ ಜಲಸಂಧಿ : ಅಮೆರಿಕವು ಇರಾನ್ ಬಂದರುಗಳ ಮೇಲೆ ಕಠಿಣ ನೌಕಾ ದಿಗ್ಬಂಧನ (Blockade) ಹೇರಿದ ಬೆನ್ನಲ್ಲೇ ಹಾರ್ಮುಜ್ ಜಲಸಂಧಿಯಲ್ಲಿ ಹೈಡ್ರಾಮಾ ನಡೆದಿದೆ. ಅಮೆರಿಕದ ದಿಗ್ಬಂಧನದ ನಡುವೆಯೂ ಕಪ್ಪು ಪಟ್ಟಿಯಲ್ಲಿರುವ (Sanctioned) ಎರಡು ನೌಕೆಗಳು ಸೇರಿದಂತೆ ಒಟ್ಟು ಮೂರು ತೈಲ ಟ್ಯಾಂಕರ್‌ಗಳು ಈ ಸಂಘರ್ಷದ ಹಾದಿಯಲ್ಲಿ ಯಶಸ್ವಿಯಾಗಿ ಸಾಗಿವೆ.


    ನಡೆದಿದ್ದೇನು?:
    ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಬಂದರುಗಳಿಗೆ ಹೋಗುವ ನೌಕೆಗಳ ಮೇಲೆ ದಿಗ್ಬಂಧನ ಘೋಷಿಸಿದ್ದಾರೆ. ಆದರೆ, ಮಂಗಳವಾರ ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋದ ಮೂರು ನೌಕೆಗಳು ಇರಾನ್ ಬಂದರುಗಳಿಗೆ ಹೋಗದ ಕಾರಣ ಅವುಗಳಿಗೆ ಯಾವುದೇ ತಾಂತ್ರಿಕ ಅಡ್ಡಿಯಾಗಿಲ್ಲ. ಇದರಲ್ಲಿ ಅಮೆರಿಕದ ಕಪ್ಪು ಪಟ್ಟಿಯಲ್ಲಿರುವ ‘ಮರ್ಲಿಕಿಶನ್’ (Murlikishan) ಮತ್ತು ‘ರಿಚ್ ಸ್ಟಾರಿ’ (Rich Starry) ಎಂಬ ನೌಕೆಗಳು ಕೂಡ ಸೇರಿವೆ. ‘ರಿಚ್ ಸ್ಟಾರಿ’ ನೌಕೆಯು ದಿಗ್ಬಂಧನ ಆರಂಭವಾದ ನಂತರ ಈ ಜಲಸಂಧಿಯನ್ನು ದಾಟಿ ಹೊರಬಂದ ಮೊದಲ ಅಂತರಾಷ್ಟ್ರೀಯ ನೌಕೆಯಾಗಿದೆ.

    ಚೀನಾ ತೀವ್ರ ಕಿಡಿ: ಅಮೆರಿಕದ ಈ ಮಿಲಿಟರಿ ಕ್ರಮವನ್ನು ಚೀನಾ ತೀವ್ರವಾಗಿ ಖಂಡಿಸಿದೆ. ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಗುವೋ ಜಿಯಾಕುನ್ ಮಾತನಾಡಿ, “ಅಮೆರಿಕದ ಈ ಹಠಾತ್ ದಿಗ್ಬಂಧನ ಕ್ರಮವು ಈಗಾಗಲೇ ದುರ್ಬಲವಾಗಿರುವ ಕದನ ವಿರಾಮ ಒಪ್ಪಂದವನ್ನು ಹಾಳುಮಾಡುತ್ತದೆ ಮತ್ತು ಜಾಗತಿಕ ಇಂಧನ ಸುರಕ್ಷತೆಗೆ ದೊಡ್ಡ ಅಪಾಯ ತಂದೊಡ್ಡುತ್ತದೆ. ಇದು ಅತ್ಯಂತ ಬೇಜವಾಬ್ದಾರಿಯುತ ವರ್ತನೆ” ಎಂದು ಕಿಡಿಕಾರಿದ್ದಾರೆ. ಚೀನಾ ತನ್ನ ಅರ್ಧಕ್ಕಿಂತ ಹೆಚ್ಚು ತೈಲವನ್ನು ಇರಾನ್ ಮತ್ತು ಮಧ್ಯಪ್ರಾಚ್ಯದಿಂದಲೇ ಪಡೆಯುತ್ತಿರುವುದು ಈ ಆಕ್ರೋಶಕ್ಕೆ ಪ್ರಮುಖ ಕಾರಣವಾಗಿದೆ.

    ಹೆಚ್ಚಿದ ಆತಂಕ: ಸದ್ಯ ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಶೀತಲ ಸಮರ ಮುಂದುವರಿದಿದೆ. “ಒಂದು ವೇಳೆ ಅಮೆರಿಕವು ಇರಾನ್ ನೌಕೆಗಳನ್ನು ತಡೆದರೆ, ಪ್ರತಿಯಾಗಿ ಇರಾನ್ ಕೂಡ ಇತರ ದೇಶಗಳ ನೌಕೆಗಳನ್ನು ತಡೆಯುವ ಸಾಧ್ಯತೆಯಿದೆ. ಇದು ಜಾಗತಿಕವಾಗಿ ಪೆಟ್ರೋಲ್ ಮತ್ತು ಗ್ಯಾಸ್ ಬೆಲೆಗಳು ಗಗನಕ್ಕೇರಲು ಕಾರಣವಾಗಬಹುದು” ಎಂದು ರಾಜಕೀಯ ವಿಶ್ಲೇಷಕರು ಎಚ್ಚರಿಸಿದ್ದಾರೆ. ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆದ ಶಾಂತಿ ಮಾತುಕತೆ ವಿಫಲವಾದ ನಂತರ ಈ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿದೆ.

    LEAVE A REPLY

    Please enter your comment!
    Please enter your name here

    error: Content is protected !!