Homeಆರೋಗ್ಯHealth alerts : ರಾತ್ರಿ ಮಲಗುವ ಮುನ್ನ ಸೇಬು ಸೇವನೆ ಆರೋಗ್ಯಕ್ಕೆ ಒಳ್ಳೆಯದೇ?

Health alerts : ರಾತ್ರಿ ಮಲಗುವ ಮುನ್ನ ಸೇಬು ಸೇವನೆ ಆರೋಗ್ಯಕ್ಕೆ ಒಳ್ಳೆಯದೇ?

Health alerts : “ದಿನಕ್ಕೊಂದು ಸೇಬು ತಿಂದರೆ ವೈದ್ಯರಿಂದ ದೂರವಿರಬಹುದು” ಎಂಬ ನಾಣ್ಣುಡಿ ಪ್ರಸಿದ್ಧವಾಗಿದೆ. ಸೇಬಿನಲ್ಲಿರುವ ನಾರಿನಂಶ (ಫೈಬರ್), ವಿಟಮಿನ್ ಸಿ ಮತ್ತು ಆಂಟಿಆಕ್ಸಿಡೆಂಟ್‌ಗಳು ದೇಹಕ್ಕೆ ಅಪಾರ ಪ್ರಯೋಜನಗಳನ್ನು ನೀಡುತ್ತವೆ. ಆದರೆ ರಾತ್ರಿ ಮಲಗುವ ಮುನ್ನ ಇದನ್ನು ಸೇವಿಸುವುದು ಸರಿಯೇ ಎಂಬ ಗೊಂದಲ ಹಲವರಲ್ಲಿದೆ.

ಜೀರ್ಣಕ್ರಿಯೆ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆ:

ಆರೋಗ್ಯವಂತ ವ್ಯಕ್ತಿಗೆ ರಾತ್ರಿ ಒಂದು ಸೇಬು ತಿನ್ನುವುದು ಅಪಾಯಕಾರಿಯಲ್ಲ, ಬದಲಾಗಿ ಜಂಕ್ ಫುಡ್‌ಗೆ ಸೂಕ್ತ ಪರ್ಯಾಯವಾಗಿದೆ. ಆದರೆ ಮಲಗುವ ಕೆಲವೇ ನಿಮಿಷಗಳ ಮುನ್ನ ಸೇವಿಸಿದಾಗ, ಅದರಲ್ಲಿರುವ ಫೈಬರ್ ಹಾಗೂ ನೈಸರ್ಗಿಕ ಕಾರ್ಬೋಹೈಡ್ರೇಟ್‌ಗಳಿಂದಾಗಿ ಕೆಲವರಿಗೆ ಗ್ಯಾಸ್, ಹೊಟ್ಟೆ ಉಬ್ಬರ ಅಥವಾ ಅಸ್ವಸ್ಥತೆ ಎದುರಾಗಬಹುದು.

ಆಸಿಡ್ ರಿಫ್ಲಕ್ಸ್ & ಉತ್ತಮ ಸಮಯ:

ಸೇಬಿನಲ್ಲಿ ನೈಸರ್ಗಿಕ ಆಮ್ಲಗಳಿರುವುದರಿಂದ ಆಸಿಡ್ ರಿಫ್ಲಕ್ಸ್ ಅಥವಾ ಎದೆಯುರಿ ಇರುವವರಿಗೆ ರಾತ್ರಿ ಸೇವನೆಯು ಸಮಸ್ಯೆಯನ್ನು ಹೆಚ್ಚಿಸಬಹುದು. ಬೆಳಗಿನ ಉಪಹಾರ, ಮಧ್ಯಾಹ್ನದ ಸ್ನ್ಯಾಕ್ಸ್ ಅಥವಾ ಸಂಜೆ ಸೇವನೆಗೆ ಇದು ಅತ್ಯಂತ ಸೂಕ್ತ. ಜ್ಯೂಸ್‌ಗಿಂತ ಸಂಪೂರ್ಣ ಹಣ್ಣನ್ನು ಅಗಿದು ತಿನ್ನುವುದರಿಂದ ಹೆಚ್ಚಿನ ನಾರಿನಂಶ ದೇಹಕ್ಕೆ ದೊರೆಯುತ್ತದೆ. ನಿರಂತರವಾಗಿ ಜೀರ್ಣಕ್ರಿಯೆ ತೊಂದರೆ ಕಾಣಿಸಿಕೊಂಡರೆ ವೈದ್ಯರ ಸಲಹೆ ಪಡೆಯುವುದು ಉತ್ತಮ.

ಇದನ್ನು ಓದಿ : Udupi : ಉಡುಪಿ ಲಾಡ್ಜ್‌ನಲ್ಲಿ ಗದಗ್ ಯುವಕ ಆತ್ಮಹತ್ಯೆ!

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments