Thursday, April 2, 2026
HomeEducationKarnataka 1st PUC Result 2026 : ಪ್ರಥಮ ಪಿಯುಸಿ ರಿಸಲ್ಟ್ ಇಂದು ಔಟ್! ನಿಮ್ಮ...

Karnataka 1st PUC Result 2026 : ಪ್ರಥಮ ಪಿಯುಸಿ ರಿಸಲ್ಟ್ ಇಂದು ಔಟ್! ನಿಮ್ಮ ಅಂಕಪಟ್ಟಿ ಚೆಕ್ ಮಾಡುವುದು ಹೇಗೆ?

ಕರ್ನಾಟಕ : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು (KSEAB) 2026ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳಿನಲ್ಲಿ ನಡೆಸಿದ್ದ ಪ್ರಥಮ ಪಿಯುಸಿ ಪರೀಕ್ಷೆಯ ಫಲಿತಾಂಶವನ್ನು ಇಂದು ಬಿಡುಗಡೆ ಮಾಡುತ್ತಿದೆ. ಈ ಬಾರಿ ರಾಜ್ಯಾದ್ಯಂತ ಸುಮಾರು 6 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ವಿದ್ಯಾರ್ಥಿಗಳು ತಮ್ಮ ಕಾಲೇಜುಗಳಲ್ಲಿ ಅಥವಾ ಆನ್‌ಲೈನ್ ಮೂಲಕ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಫಲಿತಾಂಶವನ್ನು ವೀಕ್ಷಿಸಬಹುದಾಗಿದೆ.

ಪ್ರಕಟಣಾ ಕ್ರಮದಲ್ಲಿ ಬದಲಾವಣೆ:

ಈ ಬಾರಿ ಮಂಡಳಿಯು ಫಲಿತಾಂಶ ಪ್ರಕಟಿಸುವ ವಿಧಾನದಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಎಲ್ಲ ಜಿಲ್ಲೆಗಳ ಫಲಿತಾಂಶ ಒಂದೇ ಬಾರಿಗೆ ಲಭ್ಯವಾಗುವ ಬದಲು, ಹಂತ ಹಂತವಾಗಿ ಬಿಡುಗಡೆ ಮಾಡಲಾಗುತ್ತಿದೆ. ದಕ್ಷಿಣ ಕನ್ನಡ ಸೇರಿದಂತೆ ಕೆಲವು ಜಿಲ್ಲೆಗಳ ಕಾಲೇಜುಗಳಿಗೆ ಮೊದಲ ಹಂತದಲ್ಲೇ ಫಲಿತಾಂಶ ತಲುಪುವ ಸಾಧ್ಯತೆಯಿದ್ದು, ಉಳಿದ ಜಿಲ್ಲೆಗಳ ವಿದ್ಯಾರ್ಥಿಗಳು ತಮ್ಮ ಫಲಿತಾಂಶಕ್ಕಾಗಿ ಸ್ವಲ್ಪ ಸಮಯ ಕಾಯಬೇಕಾಗಬಹುದು.

ರಿಸಲ್ಟ್ ನೋಡುವುದು ಹೇಗೆ? 

  • ವೆಬ್‌ಸೈಟ್‌ಗೆ ಭೇಟಿ ನೀಡಿ (karresults.nic.in).
  • ‘1st PUC Annual Exam Result 2026’ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ನೋಂದಣಿ ಸಂಖ್ಯೆ (Register Number) ನಮೂದಿಸಿ.
  • ನಿಮ್ಮ ವಿಷಯದ ವಿಭಾಗ (Science/Arts/Commerce) ಆಯ್ಕೆ ಮಾಡಿ.
  • ‘Submit’ ಕೊಟ್ಟರೆ ನಿಮ್ಮ ಅಂಕಪಟ್ಟಿ ಪರದೆಯ ಮೇಲೆ ಬರುತ್ತದೆ.

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!