Home ತಾಜಾ ಸುದ್ದಿ Belthangady : ಕಾರು-ಬೈಕ್ ನಡುವೆ ಭೀಕರ ಅಪಘಾತ ; ಪ್ರಗತಿಪರ ಕೃಷಿಕ ಬಳಂಜ ಅನಿಲ್ ಭಟ್...

    Belthangady : ಕಾರು-ಬೈಕ್ ನಡುವೆ ಭೀಕರ ಅಪಘಾತ ; ಪ್ರಗತಿಪರ ಕೃಷಿಕ ಬಳಂಜ ಅನಿಲ್ ಭಟ್ ಪತ್ನಿ ಸ್ಥಳದಲ್ಲೇ ಸಾವು!

    0
    46
    Belthangady: Car-bike accident; Progressive farmer Balanja Anil Bhatt's wife died on the spot!

    ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ಕನ್ನಡಿಕಟ್ಟೆ ಬಳಿ ಮೇ 17 ರಂದು ಭಾನುವಾರ ತಡರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಪ್ರಗತಿಪರ ಕೃಷಿಕರೊಬ್ಬರ ಪತ್ನಿ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ.

    ಬೆಳ್ತಂಗಡಿ ತಾಲೂಕಿನ ಬಳಂಜ ಗ್ರಾಮದ ನಿವಾಸಿಯಾದ, ಪ್ರಸಿದ್ಧ ಬಳಂಜ ಫಾರ್ಮ್ಸ್‌ನ ಮಾಲೀಕ ಹಾಗೂ ಪ್ರಗತಿಪರ ಕೃಷಿಕ ಅನಿಲ್ ಭಟ್ (45) ಮತ್ತು ಅವರ ಪತ್ನಿ ಶೈಲಜಾ (35) ಅವರು ತಮ್ಮ ಫಾರ್ಮ್‌ನ ಕೆಲಸಗಳನ್ನೆಲ್ಲಾ ಮುಗಿಸಿಕೊಂಡು ಸೈಟ್‌ಗೆ ಹೋಗಲು ಬೈಕ್‌ನಲ್ಲಿ ಹೊರಟಿದ್ದರು. ಈ ವೇಳೆ ಕನ್ನಡಿಕಟ್ಟೆ ತಲುಪುತ್ತಿದ್ದಂತೆ ಎದುರಿನಿಂದ ಬಂದ ವೇಗದ ಕಾರು ಮತ್ತು ಇವರ ಬೈಕ್ ನಡುವೆ ಅತ್ಯಂತ ಭೀಕರ ಮುಖಾಮುಖಿ ಡಿಕ್ಕಿ ಸಂಭವಿಸಿದೆ.

    ಈ ರಣಭೀಕರ ಅಪಘಾತದ ತೀವ್ರತೆಗೆ ಬೈಕ್‌ನ ಹಿಂಬದಿಯಲ್ಲಿ ಕುಳಿತಿದ್ದ ಶೈಲಜಾ ಅವರು ರಸ್ತೆಗೆ ಎಸೆಯಲ್ಪಟ್ಟು, ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಇನ್ನು ಬೈಕ್ ಚಲಾಯಿಸುತ್ತಿದ್ದ ಅನಿಲ್ ಭಟ್ ಅವರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಅದೃಷ್ಟವಶಾತ್ ಇವರ ಜೊತೆಯಲ್ಲಿದ್ದ ಪುಟ್ಟ ಮಗ ಸಣ್ಣಪುಟ್ಟ ಗಾಯಗಳೊಂದಿಗೆ ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

    ಘಟನೆ ನಡೆದ ತಕ್ಷಣವೇ ಸ್ಥಳಕ್ಕೆ ಬೆಳ್ತಂಗಡಿ ಸಂಚಾರಿ ಪೊಲೀಸರು ಧಾವಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ಕಾರಣವಾದ ಕಾರು ಮತ್ತು ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ನಿನ್ನೆ ತಡರಾತ್ರಿ ನಡೆದ ಈ ದುರಂತ ಬಳಂಜ ಗ್ರಾಮದಲ್ಲಿ ತೀವ್ರ ಶೋಕದ ವಾತಾವರಣ ಮೂಡಿಸಿದೆ.

    ಇದನ್ನು ಓದಿ : Father Kills Daughter : ಹೆತ್ತ ಮಗಳನ್ನು ಭೀಕರವಾಗಿ ಕೊಂದು ಬಾವಿಗೆ ಎಸೆದ ರಾಕ್ಷಸ ತಂದೆ!

    LEAVE A REPLY

    Please enter your comment!
    Please enter your name here

    error: Content is protected !!