Homeತಾಜಾ ಸುದ್ದಿBihar : ಪಟ್ನಾ ಪ್ಯಾಸೆಂಜರ್ ರೈಲಿನಲ್ಲಿ ಭೀಕರ ಬೆಂಕಿ; ಪ್ಲಾಟ್‌ಫಾರ್ಮ್‌ನಲ್ಲಿ ಒಂದು ಬೋಗಿ ಬೆಂಕಿಯಲ್ಲಿ ಉರಿಯುತ್ತದೆ!

Bihar : ಪಟ್ನಾ ಪ್ಯಾಸೆಂಜರ್ ರೈಲಿನಲ್ಲಿ ಭೀಕರ ಬೆಂಕಿ; ಪ್ಲಾಟ್‌ಫಾರ್ಮ್‌ನಲ್ಲಿ ಒಂದು ಬೋಗಿ ಬೆಂಕಿಯಲ್ಲಿ ಉರಿಯುತ್ತದೆ!

ನವದೆಹಲಿ : ಬಿಹಾರದ ಸಸಾರಾಂ ರೈಲು ನಿಲ್ದಾಣದಲ್ಲಿ ಪಟ್ನಾಕ್ಕೆ ಹೊರಡಲು ಸಜ್ಜಾಗಿದ್ದ ಫಾಸ್ಟ್ ಪ್ಯಾಸೆಂಜರ್ ರೈಲೊಂದರ ಬೋಗಿಯಲ್ಲಿ ಆಕಸ್ಮಿಕವಾಗಿ ಭೀಕರ ಬೆಂಕಿ ಕಾಣಿಸಿಕೊಂಡಿದ್ದು, ಪ್ರಯಾಣಿಕರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.

ಸಸಾರಾಂ ರೈಲು ನಿಲ್ದಾಣದ ಪ್ಲಾಟ್‌ಫಾರಂ ನಂಬರ್ 6ರಲ್ಲಿ ನಿಂತಿದ್ದ ‘ಸಸಾರಾಂ-ಪಟ್ನಾ ಫಾಸ್ಟ್ ಪ್ಯಾಸೆಂಜರ್’ ರೈಲು ಹೊರಡುವ ಕೆಲವೇ ಕ್ಷಣಗಳ ಮುನ್ನ ಈ ಅನಾಹುತ ಸಂಭವಿಸಿದೆ. ರೈಲಿನ ಒಂದು ಬೋಗಿಯಲ್ಲಿ ಹಠಾತ್ತನೆ ಬೆಂಕಿ ಕಾಣಿಸಿಕೊಂಡಿದ್ದು, ನೋಡನೋಡುತ್ತಿದ್ದಂತೆ ಇಡೀ ಬೋಗಿಯಿಂದ ದಟ್ಟವಾದ ಕಪ್ಪು ಹೊಗೆ ಆಕಾಶಕ್ಕೆ ವ್ಯಾಪಿಸಿದೆ. ಪ್ರಾಥಮಿಕ ತನಿಖೆಯ ಪ್ರಕಾರ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಈ ಬೆಂಕಿ ಅಪಘಾತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.

ಪ್ಲಾಟ್‌ಫಾರಂನಲ್ಲೇ ರೈಲು ಧಗಧಗನೆ ಉರಿಯುತ್ತಿದ್ದನ್ನು ಕಂಡು ನಿಲ್ದಾಣದಲ್ಲಿದ್ದ ನೂರಾರು ಪ್ರಯಾಣಿಕರು ಪ್ರಾಣಭಯದಿಂದ ಆಚೀಚೆ ಓಡಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ರೈಲ್ವೆ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದವರು ಬೆಂಕಿಯನ್ನು ನಿಯಂತ್ರಿಸಲು ಹರಸಾಹಸ ಪಟ್ಟಿದ್ದಾರೆ. ಅದೃಷ್ಟವಶಾತ್ ರೈಲು ಹೊರಡುವ ಮುನ್ನವೇ ಈ ಘಟನೆ ನಡೆದಿದ್ದರಿಂದ ಯಾವುದೇ ಜೀವಹಾನಿ ಅಥವಾ ಗಾಯಗೊಂಡ ಬಗ್ಗೆ ವರದಿಯಾಗಿಲ್ಲ.

ಮಧ್ಯಪ್ರದೇಶದ ರತ್ಲಂ ರೈಲು ನಿಲ್ದಾಣದಲ್ಲಿ ದೆಹಲಿಗೆ ಹೊರಟಿದ್ದ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನ ಎಸಿ ಬೋಗಿಯಲ್ಲಿ ಭಾರಿ ಬೆಂಕಿ ಅನಾಹುತ ಸಂಭವಿಸಿದ ಮರುದಿನವೇ ಈ ಘಟನೆ ವರದಿಯಾಗಿದ್ದು, ಸರಣಿ ರೈಲು ಅನಾಹುತಗಳು ಪ್ರಯಾಣಿಕರಲ್ಲಿ ಭೀತಿಯನ್ನು ಹುಟ್ಟಿಸಿವೆ.

ಇದನ್ನು ಓದಿ : Belthangady : ಕಾರು-ಬೈಕ್ ನಡುವೆ ಭೀಕರ ಅಪಘಾತ ; ಪ್ರಗತಿಪರ ಕೃಷಿಕ ಬಳಂಜ ಅನಿಲ್ ಭಟ್ ಪತ್ನಿ ಸ್ಥಳದಲ್ಲೇ ಸಾವು!

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments