Monday, May 11, 2026
Homeತಾಜಾ ಸುದ್ದಿKadaba : ಕೊಲ್ಯದಕಟ್ಟಾ ಅಣೆಕಟ್ಟು ಬಳಿ ಸ್ನಾನಕ್ಕೆ ಹೋದ ಇಬ್ಬರು ವಿದ್ಯಾರ್ಥಿನಿಯರು ನೀರಿನಲ್ಲಿ ಮುಳುಗಿ ಸಾವು

Kadaba : ಕೊಲ್ಯದಕಟ್ಟಾ ಅಣೆಕಟ್ಟು ಬಳಿ ಸ್ನಾನಕ್ಕೆ ಹೋದ ಇಬ್ಬರು ವಿದ್ಯಾರ್ಥಿನಿಯರು ನೀರಿನಲ್ಲಿ ಮುಳುಗಿ ಸಾವು

ಕಡಬ, ಮೇ 9 : ಕಡಬ ತಾಲೂಕಿನ ಕುಟ್ರುಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಗುಂಡ್ಯ ನದಿಯ ಕೋಲ್ಯದಕಟ್ಟೆ ಅಣೆಕಟ್ಟು ಬಳಿ ಶುಕ್ರವಾರ ಸಂಜೆ ಸ್ನಾನಕ್ಕೆ ತೆರಳಿದ್ದ ಇಬ್ಬರು ವಿದ್ಯಾರ್ಥಿನಿಯರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮೃತಪಟ್ಟವರನ್ನು ಕುಟ್ರುಪಾಡಿ ಗ್ರಾಮದ ವಿಮಲಗಿರಿ ನಿವಾಸಿಗಳಾದ ಅರ್ಪಿತಾ (15) ಮತ್ತು ಸುನೀತಾ (21) ಎಂದು ಗುರುತಿಸಲಾಗಿದೆ.

ದುರಂತ ಸಂಭವಿಸಿದ್ದು ಹೇಗೆ?

ರಜೆ ಇದ್ದ ಕಾರಣ ಐವರು ಸ್ನೇಹಿತರ ತಂಡವು ನದಿಗೆ ವಿಹಾರಕ್ಕೆಂದು ತೆರಳಿತ್ತು. ಸ್ನಾನ ಮಾಡಲು ನೀರಿಗಿಳಿದ ಸಂದರ್ಭದಲ್ಲಿ ಅರ್ಪಿತಾ ಮತ್ತು ಸುನೀತಾ ಅವರಿಗೆ ನೀರಿನ ಆಳದ ಅಂದಾಜು ಸಿಗದೆ ಮುಳುಗಲು ಪ್ರಾರಂಭಿಸಿದ್ದಾರೆ. ಜೊತೆಯಲ್ಲಿದ್ದ ಸ್ನೇಹಿತರು ಅವರನ್ನು ಉಳಿಸಲು ಎಷ್ಟೇ ಪ್ರಯತ್ನಿಸಿದರೂ ಸಹ ಫಲ ನೀಡದೆ ಇಬ್ಬರೂ ಜಲಸಮಾಧಿಯಾಗಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಕಡಬ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯ ನಿವಾಸಿಗಳ ಸಹಾಯದಿಂದ ಇಬ್ಬರು ಯುವತಿಯರ ಮೃತದೇಹಗಳನ್ನು ನೀರಿನಿಂದ ಹೊರತೆಗೆಯಲಾಗಿದೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಘಟನಾ ಸ್ಥಳದಲ್ಲಿ ಶೋಕದ ಛಾಯೆ ಆವರಿಸಿದೆ. ಈ ಸಂಬಂಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನು ಓದಿ : AC side effects on health : ಎಸಿ ಬಳಸುವವರಿಗೆ ಕಾದಿದೆ ಗಂಡಾಂತರ! ಸತತ ಕೆಮ್ಮು ಮತ್ತು ಚರ್ಮ ಒಣಗಲು ಅಸಲಿ ಕಾರಣ ಎಸಿಯ ಈ ಒಂದು ತಪ್ಪು!

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!