Home LOCAL Panemangalore : ನೇತ್ರಾವತಿ ನದಿಯಲ್ಲಿ ಗೂಡಿನಬಳಿಯ ಯುವಕ ಇರ್ಫಾನ್ ಮೃತದೇಹ ಪತ್ತೆ!

Panemangalore : ನೇತ್ರಾವತಿ ನದಿಯಲ್ಲಿ ಗೂಡಿನಬಳಿಯ ಯುವಕ ಇರ್ಫಾನ್ ಮೃತದೇಹ ಪತ್ತೆ!

0
24
Panemangalore: The body of a young man named Irfan from Gudina was found in the Netravati river!

ಬಂಟ್ವಾಳ : ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ನೇತ್ರಾವತಿ ನದಿಯಲ್ಲಿ ಗುರುವಾರ ಯುವಕನೊಬ್ಬನ ಮೃತದೇಹ ಪತ್ತೆಯಾಗಿದ್ದು, ಮೃತನ ಕೈಗಳಲ್ಲಿ ಗಾಯದ ಗುರುತುಗಳಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಬಂಟ್ವಾಳದ ಬಿ.ಮೂಡ ಗ್ರಾಮದ ಗೂಡಿನಬಳಿ ನಿವಾಸಿ ಮಹಮ್ಮದ್ ಎಂಬವರ ಪುತ್ರ ಇರ್ಫಾನ್ (36) ನದಿಯಲ್ಲಿ ಶವವಾಗಿ ಪತ್ತೆಯಾದ ದುರ್ದೈವಿ ಯುವಕರಾಗಿದ್ದಾರೆ. ಬಂಟ್ವಾಳ ಪುರಸಭೆಯ ಪೌರಕಾರ್ಮಿಕರು ನದಿಯಲ್ಲಿ ತ್ಯಾಜ್ಯ ನಿರ್ವಹಣೆ ಕೆಲಸ ಮಾಡುತ್ತಿದ್ದ ಭರದಲ್ಲಿ ತೇಲುತ್ತಿದ್ದ ಮೃತದೇಹವನ್ನು ಮೊದಲು ಗಮನಿಸಿದ್ದಾರೆ. ತಕ್ಷಣವೇ ಅವರು ಬಂಟ್ವಾಳ ನಗರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಹಾಗೂ ಗೂಡಿನಬಳಿಯ ಸ್ಥಳೀಯರು ಸೇರಿ ನದಿಯಿಂದ ಶವವನ್ನು ಮೇಲಕ್ಕೆತ್ತಿದ್ದಾರಾದರೂ, ಆರಂಭದಲ್ಲಿ ಗುರುತು ಪತ್ತೆ ಹಚ್ಚಲು ಸಾಧ್ಯವಾಗದ ಕಾರಣ ದೇಹವನ್ನು ಬಂಟ್ವಾಳ ಸರ್ಕಾರಿ ಆಸ್ಪತ್ರೆಯ ಶವಾಗಾರದ ಶೀತಲೀಕರಣ ಘಟಕದಲ್ಲಿ ಇಡಲಾಗಿತ್ತು.

ಬಳಿಕ ಸಂಜೆ ವೇಳೆ ತೀವ್ರ ಹುಡುಕಾಟದ ನಂತರ ಮೃತದೇಹದ ಗುರುತು ಪತ್ತೆಯಾಗಿದ್ದು, ಅದು ಮೂರು ದಿನಗಳಿಂದ ನಾಪತ್ತೆಯಾಗಿದ್ದ ಇರ್ಫಾನ್ ಎಂದು ತಿಳಿದುಬಂದಿದೆ. ವಿವಾಹಿತನಾಗಿದ್ದ ಇರ್ಫಾನ್ ಅವರಿಗೆ ಮೂವರು ಮಕ್ಕಳಿದ್ದಾರೆ. ಈ ಹಿಂದೆ ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿದ್ದ ಇವರು, ಮೂರು ವರ್ಷಗಳ ಹಿಂದಷ್ಟೇ ಊರಿಗೆ ಮರಳಿ ರಿಕ್ಷಾ ಖರೀದಿಸಿ ಅದರಲ್ಲಿ ದುಡಿಯುತ್ತಾ ಜೀವನ ಸಾಗಿಸುತ್ತಿದ್ದರು. ಕಳೆದ ಮೂರು ದಿನಗಳಿಂದ ಇರ್ಫಾನ್ ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಆತಂಕದಲ್ಲಿದ್ದರು, ಸದ್ಯ ನದಿಯಲ್ಲಿ ಶವವಾಗಿ ಪತ್ತೆಯಾಗಿರುವುದು ಇಡೀ ಗೂಡಿನಬಳಿ ಗ್ರಾಮವನ್ನು ಶೋಕಸಾಗರದಲ್ಲಿ ಮುಳುಗಿಸಿದೆ.

ಆದರೆ, ಈ ಸಾವು ಸಾಮಾನ್ಯ ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಭಾರಿ ಸಂಶಯ ಸದ್ಯ ಕರಾವಳಿಯಲ್ಲಿ ಎದ್ದಿದೆ. ಮೃತದೇಹದ ಕೈಗಳ ಭಾಗದಲ್ಲಿ ತೀವ್ರ ಗಾಯದ ಗುರುತುಗಳು ಪತ್ತೆಯಾಗಿರುವುದು ಕುಟುಂಬಸ್ಥರಲ್ಲಿ ತೀವ್ರ ಅನುಮಾನ ಹುಟ್ಟುಹಾಕಿದೆ. ಇದೊಂದು ವ್ಯವಸ್ಥಿತ ಕೊಲೆ ನಡೆಸಿ ನದಿಗೆ ಎಸೆದಿರುವ ಸಾಧ್ಯತೆ ಇದೆ ಎಂದು ಕುಟುಂಬದ ಮೂಲಗಳು ಶಂಕೆ ವ್ಯಕ್ತಪಡಿಸಿದ್ದು, ಮೃತದೇಹದ ನಿಷ್ಪಕ್ಷಪಾತ ಮರಣೋತ್ತರ ಪರೀಕ್ಷೆ ನಡೆಸಿ ತಮಗೆ ನ್ಯಾಯ ಒದಗಿಸಿಕೊಡಬೇಕೆಂದು ಪಟ್ಟು ಹಿಡಿದಿದ್ದಾರೆ. ಬಂಟ್ವಾಳ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ತೀವ್ರಗೊಳಿಸಿದ್ದಾರೆ.

ಇದನ್ನು ಓದಿ : BJP vs Cockroach Janta Party : ಐದೇ ದಿನಗಳಲ್ಲಿ 1.2 ಕೋಟಿ ಫಾಲೋವರ್ಸ್; ಇನ್‌ಸ್ಟಾಗ್ರಾಮ್‌ನಲ್ಲಿ ಬಿಜೆಪಿಯನ್ನೇ ಧೂಳೀಪಟ ಮಾಡಿದ ‘ಕಾಕ್ರೋಚ್ ಜನತಾ ಪಕ್ಷ’!

LEAVE A REPLY

Please enter your comment!
Please enter your name here

error: Content is protected !!