Monday, May 11, 2026
Homeತಾಜಾ ಸುದ್ದಿThalapathy Vijay : ಡಿಎಂಕೆ-ಎಐಎಡಿಎಂಕೆ ಮಣಿಸಲು 107 ಶಾಸಕರ 'ರಾಜೀನಾಮೆ' ಅಸ್ತ್ರ ಪ್ರಯೋಗಿಸಿದ ನಟ...

Thalapathy Vijay : ಡಿಎಂಕೆ-ಎಐಎಡಿಎಂಕೆ ಮಣಿಸಲು 107 ಶಾಸಕರ ‘ರಾಜೀನಾಮೆ’ ಅಸ್ತ್ರ ಪ್ರಯೋಗಿಸಿದ ನಟ ವಿಜಯ್!

ಚೆನ್ನೈ : ತಮಿಳುನಾಡಿನಲ್ಲಿ ಡಿಎಂಕೆ (DMK) ಅಥವಾ ಎಐಎಡಿಎಂಕೆ (AIADMK) ಸರ್ಕಾರ ರಚಿಸಲು ಪ್ರಯತ್ನಿಸಿದರೆ, ತಮ್ಮ ಪಕ್ಷದ ಎಲ್ಲಾ 107 ಶಾಸಕರು ಸಾಮೂಹಿಕವಾಗಿ ರಾಜೀನಾಮೆ ನೀಡಲಿದ್ದಾರೆ ಎಂಬ ಸ್ಫೋಟಕ ನಿರ್ಧಾರವನ್ನು ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷ ಕೈಗೊಂಡಿದೆ ಎಂದು ವರದಿಯಾಗಿದೆ. ಎನ್‌ಡಿಟಿವಿ (NDTV) ವರದಿಗಳನ್ನು ಉಲ್ಲೇಖಿಸಿ ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಕಾಳ್ಗಿಚ್ಚಿನಂತೆ ಹಬ್ಬುತ್ತಿದೆ.

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಟಿವಿ ಕೆ (TVK) ಪಕ್ಷವು 100ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡಿದೆ. ಸಾಂಪ್ರದಾಯಿಕ ದ್ರಾವಿಡ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆಯನ್ನು ಅಧಿಕಾರದಿಂದ ದೂರವಿಡಲು ವಿಜಯ್ ಈ ಕಠಿಣ ನಿರ್ಧಾರಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಈ ಪಕ್ಷಗಳು ಮೈತ್ರಿ ಮೂಲಕ ಸರ್ಕಾರ ರಚಿಸಲು ಮುಂದಾದರೆ, ಉಪಚುನಾವಣೆಯ ಹಾದಿ ಹಿಡಿಯುವ ಮೂಲಕ ಜನರ ಬೆಂಬಲವನ್ನು ಮತ್ತೊಮ್ಮೆ ಸಾಬೀತುಪಡಿಸಲು ವಿಜಯ್ ಸಿದ್ಧರಾಗಿದ್ದಾರೆ.

ಈ ಬೆಳವಣಿಗೆಯಿಂದಾಗಿ ತಮಿಳುನಾಡು ರಾಜಕೀಯದಲ್ಲಿ ಅನಿಶ್ಚಿತತೆ ಮೂಡಿದ್ದು, ವಿಜಯ್ ಅವರ “ರಾಜೀನಾಮೆ ಅಸ್ತ್ರ” ಇತರ ಪಕ್ಷಗಳಿಗೆ ನಡುಕ ಹುಟ್ಟಿಸಿದೆ. ಅತಂತ್ರ ವಿಧಾನಸಭೆ ನಿರ್ಮಾಣವಾಗುವ ಸಾಧ್ಯತೆಗಳ ನಡುವೆ, ದಳಪತಿ ವಿಜಯ್ ಅವರ ಮುಂದಿನ ನಡೆ ಇಡೀ ದಕ್ಷಿಣ ಭಾರತದ ರಾಜಕಾರಣದ ದಿಕ್ಸೂಚಿಯನ್ನು ಬದಲಿಸುವ ನಿರೀಕ್ಷೆಯಿದೆ.

ಇದನ್ನು ಓದಿ : Mysore : ದರ್ಶನ್ ಬಿಡುಗಡೆಗಾಗಿ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ; ಹಿಮಾಮ್ ಶಾಲಿ ದರ್ಗಾದಲ್ಲಿ ಅಭಿಮಾನಿಗಳಿಂದ ಹರಕೆ!

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!