Home LOCAL Udupi | ಉದ್ಯಾವರದ ಜನಪ್ರಿಯ ಕ್ರಿಕೆಟಿಗ ಸಮೀರ್ ಶರೀಫ್ ಇನ್ನಿಲ್ಲ! ಹಸನ್ಮುಖಿ ಸಮಾಜ ಸೇವಕನ ಅಕಾಲಿಕ...

Udupi | ಉದ್ಯಾವರದ ಜನಪ್ರಿಯ ಕ್ರಿಕೆಟಿಗ ಸಮೀರ್ ಶರೀಫ್ ಇನ್ನಿಲ್ಲ! ಹಸನ್ಮುಖಿ ಸಮಾಜ ಸೇವಕನ ಅಕಾಲಿಕ ನಿಧನ

0
80
Udupi | Udupi's popular cricketer Sameer Sharif is no more! Untimely death of a cheerful social worker

ಉಡುಪಿ :  ಉಡುಪಿ  ಜಿಲ್ಲೆಯ ಉದ್ಯಾವರ ನಿವಾಸಿಯಾದ ಮೊಹಮ್ಮದ್ ಸಮೀರ್ (ಸಮೀರ್ ಪಾಂದೆ) ಇಂದು ಮುಂಜಾನೆ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅತ್ಯಂತ ಹಸನ್ಮುಖಿ ವ್ಯಕ್ತಿತ್ವದ ಇವರು ದೀರ್ಘಕಾಲ ದುಬೈನಲ್ಲಿ ಉದ್ಯೋಗದಲ್ಲಿದ್ದರು. ಇತ್ತೀಚೆಗೆ ತೀವ್ರ ಅನಾರೋಗ್ಯಕ್ಕೀಡಾಗಿದ್ದ ಅವರು ಚಿಕಿತ್ಸೆಗಾಗಿ ದುಬೈನಿಂದ ಊರಿಗೆ ಆಗಮಿಸಿದ್ದರು. ಇಂದು ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.

ಸಮೀರ್ ಅವರು ಉದ್ಯಾವರದ ಕ್ರೀಡಾ ಮತ್ತು ಸಾಮಾಜಿಕ ವಲಯದಲ್ಲಿ ಬಹಳ ಸಕ್ರಿಯರಾಗಿದ್ದರು. ಒಬ್ಬ ಪ್ರತಿಭಾವಂತ ಕ್ರಿಕೆಟ್ ಪಟುವಾಗಿದ್ದ ಇವರು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ‘ಉದ್ಯಾವರ ಫ್ರೆಂಡ್ಸ್ ಸರ್ಕಲ್’ (UFC) ಸಂಘಟನೆಯ ಸಕ್ರಿಯ ಸದಸ್ಯರಾಗಿದ್ದರು. ದುಬೈನಲ್ಲಿದ್ದಾಗಲೂ ಅವರು ತಮ್ಮ ಹುಟ್ಟೂರಿನ ಸಾಮಾಜಿಕ ಕಾರ್ಯಗಳಿಗೆ ಮತ್ತು ಸಂಕಷ್ಟದಲ್ಲಿರುವವರಿಗೆ ಸದಾ ಸಹಾಯ ಹಸ್ತ ಚಾಚುತ್ತಿದ್ದರು.

ಸಮೀರ್ ಅವರ ನಿಧನಕ್ಕೆ ಉದ್ಯಾವರ ಮುಸ್ಲಿಂ ಜಮಾತ್, ಉದ್ಯಾವರ ಫ್ರೆಂಡ್ಸ್ ಸರ್ಕಲ್ ಹಾಗೂ ಅವರ ಅಪಾರ ಅಭಿಮಾನಿ ಬಳಗ ತೀವ್ರ ಸಂತಾಪ ಸೂಚಿಸಿದೆ. ಮೃತರ ಅಂತ್ಯಕ್ರಿಯೆಯು ಇಂದು (ಮಾರ್ಚ್ 23, ಸೋಮವಾರ) ಸಂಜೆ 4:30ಕ್ಕೆ ಉದ್ಯಾವರ ಮೊಹಿದ್ದೀನ್ ಜುಮಾ ಮಸೀದಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here

error: Content is protected !!