Monday, May 11, 2026
HomeLOCALMangaluru : ಮಂಗಳೂರಿನಲ್ಲಿ ಯುವತಿಯರೇ ಟಾರ್ಗೆಟ್! ಪ್ರಾಂಕ್ ಹೆಸರಿನಲ್ಲಿ ನಡೆಯುತ್ತಿರೋದು ಅಸಲಿಗೆ ಏನು?

Mangaluru : ಮಂಗಳೂರಿನಲ್ಲಿ ಯುವತಿಯರೇ ಟಾರ್ಗೆಟ್! ಪ್ರಾಂಕ್ ಹೆಸರಿನಲ್ಲಿ ನಡೆಯುತ್ತಿರೋದು ಅಸಲಿಗೆ ಏನು?

ಮಂಗಳೂರು : ಮಂಗಳೂರಿನ ಕೆಲವು ಭಾಗಗಳಲ್ಲಿ ಇತ್ತೀಚೆಗೆ ಹದಿಹರೆಯದ ಯುವತಿಯರನ್ನು ಗುರಿಯಾಗಿಸಿಕೊಂಡು ಕೆಲ ಪುಂಡ ಯುವಕರ ತಂಡಗಳು ಅಲೆದಾಡುತ್ತಿರುವುದು ಸಾರ್ವಜನಿಕರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. “ಇನ್‌ಸ್ಟಾಗ್ರಾಮ್ ಫಾಲೋ ಮಾಡಿ” ಎಂಬ ನೆಪದಲ್ಲಿ ನಡೆಯುತ್ತಿರುವ ಈ ಚಟುವಟಿಕೆಗಳ ಹಿಂದೆ ಅಪಾಯದ ಮುನ್ಸೂಚನೆ ಇದೆ ಎಂದು ಹೇಳಲಾಗುತ್ತಿದೆ.

ಈ ಪುಂಡರ ತಂಡಗಳು ಮುಖ್ಯವಾಗಿ ಮಂಗಳೂರು ಸೆಂಟ್ರಲ್ ಮತ್ತು ಜಂಕ್ಷನ್ ರೈಲ್ವೆ ಸ್ಟೇಷನ್, ಪ್ರಮುಖ ಶಾಪಿಂಗ್ ಮಾಲ್‌ಗಳು, ಮಾರ್ಕೆಟ್ ಮತ್ತು ಕಾಲೇಜುಗಳ ಸುತ್ತಮುತ್ತ ಬೀಡುಬಿಟ್ಟಿವೆ. ಒಬ್ಬನ ಕೈಯಲ್ಲಿ ಹಣದ ಕಂತೆ ಮತ್ತು ಇನ್ನೊಬ್ಬನ ಕೈಯಲ್ಲಿ ಆಕರ್ಷಕ ಗಿಫ್ಟ್ ಬ್ಯಾಗ್ ಹಿಡಿದು ಓಡಾಡುವ ಇವರು, ಯುವತಿಯರ ಗುಂಪು ಕಂಡ ಕೂಡಲೇ “ಪ್ರಾಂಕ್ ಮಾಡ್ತಿದ್ದೀವಿ” ಅಥವಾ “ಒಂದು ಪ್ರಶ್ನೆ ಕೇಳ್ತೀವಿ” ಎಂದು ಮಾತು ಬೆಳೆಸುತ್ತಿದ್ದಾರೆ.

ಇದು ಕೇವಲ ಮನೋರಂಜನೆ ಅಥವಾ ಮಜಾ ಅಲ್ಲ, ಬದಲಾಗಿ ಫಾಲೋವರ್ಸ್ ಹೆಚ್ಚಿಸಿಕೊಳ್ಳುವ ಮತ್ತು ಗೆಳೆತನ ಬೆಳೆಸುವ ಹೆಸರಿನಲ್ಲಿ ಯುವತಿಯರ ವೈಯಕ್ತಿಕ ಮಾಹಿತಿ ಪಡೆಯುವ ತಂತ್ರವಾಗಿದೆ. ಕೇವಲ 100 ರೂಪಾಯಿ ಅಥವಾ ಸಣ್ಣ ಗಿಫ್ಟ್‌ನ ಆಸೆ ತೋರಿಸಿ ಹತ್ತಿರವಾಗಲು ಯತ್ನಿಸುವ ಇಂತಹ ಅಪರಿಚಿತರ ಬಗ್ಗೆ ಯುವತಿಯರು ಮತ್ತು ಪೋಷಕರು ಜಾಗರೂಕರಾಗಿರಬೇಕು. ಇಂದು ಸಣ್ಣ ವಿಷಯ ಎಂದು ನಿರ್ಲಕ್ಷ್ಯ ಮಾಡಿದರೆ, ನಾಳೆ ಇದು ದೊಡ್ಡ ಅನಾಹುತಕ್ಕೆ ದಾರಿಯಾಗಬಹುದು ಎಂದು ಎಚ್ಚರಿಸಲಾಗಿದೆ.

ಇದನ್ನು ಓದಿ : Mamata Banerjee : ಅಳಿಸಲಾದ ಮತಗಳ ಕುರಿತು ಹೊಸ ಅರ್ಜಿ ಸಲ್ಲಿಸಲು ಮಮತಾಗೆ ಸುಪ್ರೀಂ ಸೂಚನೆ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!