ಮಂಗಳೂರು : ಮಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಮಾಲ್‌ಗಳು, ಬೀಚ್‌ಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಇಂದು ಕಂಡುಬರುತ್ತಿರುವ ಒಂದು ದೃಶ್ಯವು ಅತ್ಯಂತ ಆತಂಕಕಾರಿಯಾಗಿದೆ. ಬುರ್ಖಾ ಧರಿಸಿದ ಸಣ್ಣ ಹೆಣ್ಣುಮಕ್ಕಳನ್ನು ಮತ್ತು ಯುವತಿಯರನ್ನು ಗುರಿಯಾಗಿಸಿಕೊಂಡು ಕೆಲವು ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ಸ್ ಮಾಡುತ್ತಿರುವ ‘ಮನಿ ಚಾಲೆಂಜ್’ ಮತ್ತು ‘ಗಿಫ್ಟ್ ಚಾಲೆಂಜ್’ ವೀಡಿಯೊಗಳು ಕೇವಲ ವಿನೋದವಲ್ಲ, ಬದಲಾಗಿ ಇದೊಂದು ದೊಡ್ಡ ಸಾಂಸ್ಕೃತಿಕ ಅಧಃಪತನದ ಆರಂಭವಾಗಿದೆ ಎಂಬ ಆತಂಕ ವ್ಯಕ್ತವಾಗಿದೆ.
ಕೆಲವು ಯುವಕರು ಕ್ಯಾಮೆರಾದೊಂದಿಗೆ ಸಾರ್ವಜನಿಕ ಸ್ಥಳಗಳಲ್ಲಿ ಅಲೆದಾಡುತ್ತಾ, ಅಲ್ಲಿಗೆ ಬರುವ ಮುಸ್ಲಿಂ ಹೆಣ್ಣುಮಕ್ಕಳನ್ನು ತಡೆದು ತಮ್ಮ ಪೇಜ್ ಫಾಲೋ ಮಾಡಿದ್ದೀರಾ ಎಂದು ಕೇಳುತ್ತಾರೆ. ಒಂದು ವೇಳೆ ಫಾಲೋ ಮಾಡಿದ್ದರೆ, ಹಣ ಅಥವಾ ಉಡುಗೊರೆಗಳ ಆಮಿಷವೊಡ್ಡಿ ಅವರನ್ನು ಕ್ಯಾಮೆರಾ ಮುಂದೆ ನಿಲ್ಲಿಸುತ್ತಾರೆ. ‘ನೋಟು ಎಣಿಸುವುದು’, ‘ಇಷ್ಟವಾದ ವ್ಯಕ್ತಿಯ ಹೆಸರನ್ನು ಹೇಳುವುದು’ ನಂತಹ ಕ್ಷುಲ್ಲಕ ಎನಿಸುವ ಕೆಲಸಗಳನ್ನು ಮಾಡಿಸಿ, ಅದನ್ನು ಲಕ್ಷಾಂತರ ಜನರು ನೋಡುವಂತೆ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಾರೆ. ಲೈಕ್ ಮತ್ತು ಫಾಲೋವರ್ಸ್‌ಗಾಗಿ ನಮ್ಮ ಹೆಣ್ಣುಮಕ್ಕಳನ್ನು ಪ್ರದರ್ಶನದ ವಸ್ತುವನ್ನಾಗಿ ಮಾಡುವುದು ಗೌರವದ ವಿಷಯವೇ ಎಂದು ಪೋಷಕರು ಯೋಚಿಸಬೇಕಿದೆ.
ಒಮ್ಮೆ ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಆದ ವೀಡಿಯೊಗಳು ‘ಡಿಜಿಟಲ್ ಫುಟ್‌ಪ್ರಿಂಟ್’ ಆಗಿ ಉಳಿಯುತ್ತವೆ, ಇವುಗಳನ್ನು ನಂತರ ಅಳಿಸಲು ಸಾಧ್ಯವಿಲ್ಲ. ಇಂತಹ ವೀಡಿಯೊಗಳು ದುರುಪಯೋಗವಾಗುವ ಅಥವಾ ಕೆಟ್ಟ ಕಾಮೆಂಟ್‌ಗಳಿಗೆ ಬಲಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ತಮಾಷೆಯ ಹೆಸರಿನಲ್ಲಿ ಅಪರಿಚಿತರು ಕೇಳುವ ವೈಯಕ್ತಿಕ ಪ್ರಶ್ನೆಗಳಿಗೆ ಉತ್ತರಿಸುವುದು ಹೆಣ್ಣುಮಕ್ಕಳ ಖಾಸಗಿತನ ಮತ್ತು ಘನತೆಗೆ ಧಕ್ಕೆ ತರುವ ವಿಷಯವಾಗಿದೆ. ಹಿರಿಯರು ಇಂತಹ ಚಿತಾಲ್ಕುಳಿಗಳಿಗೆ ಮಕ್ಕಳು ಬಲಿಯಾಗದಂತೆ ನೋಡಿಕೊಳ್ಳಬೇಕು ಮತ್ತು ಅಪರಿಚಿತರ ಕ್ಯಾಮೆರಾ ಮುಂದೆ ‘ನೋ’ ಎನ್ನಲು ಕಲಿಸಿಕೊಡಬೇಕಿದೆ.
ಇದನ್ನು ಓದಿ : Mangaluru : ಮಂಗಳೂರಿನಲ್ಲಿ ಯುವತಿಯರೇ ಟಾರ್ಗೆಟ್! ಪ್ರಾಂಕ್ ಹೆಸರಿನಲ್ಲಿ ನಡೆಯುತ್ತಿರೋದು ಅಸಲಿಗೆ ಏನು?

